alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಸರ್ಕಾರವನ್ನು ಸಂಕಷ್ಟಕ್ಕೆ ತಂದೊಡ್ಡಿದ್ರಾ ಜಮೀರ್ ಅಹಮದ್…?

ಯಾವುದೇ ಪಕ್ಷಕ್ಕೆ ಬಹುಮತ ಸಿಗದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಸಚಿವ ಸ್ಥಾನ ಸಿಗದ ಶಾಸಕರುಗಳು ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿದ್ದಾರೆಂಬ ಮಾತುಗಳ ಮಧ್ಯೆ ಸಚಿವ ಜಮೀರ್ ಅಹಮದ್ ಹುಟ್ಟುಹಾಕಿರುವ ಹೊಸ ವಿವಾದ ಈಗ ಸಮಸ್ಯೆ ಸೃಷ್ಟಿಸಿದೆ.

ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ಹಜ್ ಭವನಕ್ಕೆ ಟಿಪ್ಪು ಹೆಸರನ್ನು ಇಡಲಾಗುವುದು ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳುತ್ತಿದ್ದಂತೆ ಬಿಜೆಪಿ ಸಿಡಿದೆದ್ದಿದೆ.

ಹಜ್ ಭವನಕ್ಕೆ ಯಾವುದೇ ಕಾರಣಕ್ಕೂ ಟಿಪ್ಪು ಸುಲ್ತಾನ್ ಹೆಸರನ್ನು ಇಡಬಾರದೆಂದು ಆಗ್ರಹಿಸುತ್ತಿರುವ ಬಿಜೆಪಿ, ಒಂದು ವೇಳೆ ಹೆಸರನ್ನಿಟ್ಟರೆ ಭಾರಿ ಪ್ರತಿಭಟನೆ ನಡೆಸುವುದಾಗಿ ಹೇಳುತ್ತಿದೆ.

ಆದರೆ ಈ ನಿರ್ಣಯವನ್ನು ಹಿಂದೆಯೇ ತೆಗೆದುಕೊಳ್ಳಲಾಗಿದೆ ಎಂದು ಹೇಳಿರುವ ಜಮೀರ್ ಅಹಮದ್ ತಾವು ವಿವಾದವನ್ನು ಹುಟ್ಟು ಹಾಕಿಲ್ಲವೆಂದು ತಿಳಿಸಿದ್ದಾರೆ.

ನೂತನ ಸರ್ಕಾರ ಜುಲೈ 5 ರಂದು ಹೊಸ ಬಜೆಟ್ ಮಂಡನೆ ಮಾಡುವ ಸಿದ್ಧತೆಯಲ್ಲಿ ತೊಡಗಿರುವಾಗಲೇ ಈಗ ಮತ್ತೊಂದು ವಿವಾದ ತಲೆದೋರಿದ್ದು, ಇದು ಯಾವ ಹಂತ ತಲುಪುವುದೆಂಬುದನ್ನು ಕಾದುನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...