alex Certify
ಕನ್ನಡ ದುನಿಯಾ       Mobile App
       

Kannada Duniya

ಜೆಡಿಎಸ್ ತೊರೆಯಲಿದ್ದರಾ ವೈ.ಎಸ್.ವಿ. ದತ್ತಾ…?

ಜೆಡಿಎಸ್ ವರಿಷ್ಟ ದೇವೇಗೌಡರ ಮಾನಸಪುತ್ರ ಎಂದೇ ಗುರುತಿಸಲ್ಪಡುವ ಪಕ್ಷದ ರಾಜ್ಯ ವಕ್ತಾರ, ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಪಕ್ಷ ತೊರೆಯಲಿದ್ದರಾ ಎಂಬ ಪ್ರಶ್ನೆ ಈಗ ಮೂಡಿದೆ.

ಆರಂಭದಿಂದಲೂ ಜೆಡಿಎಸ್ ಪಕ್ಷದ ನಿಷ್ಠರಾಗಿ, ಪಕ್ಷ ಸಂಘಟನೆಗೆ ದುಡಿದು ಸಭ್ಯ ಹಾಗೂ ಸರಳ ರಾಜಕಾರಣಿ ಎನಿಸಿಕೊಂಡ ವೈ.ಎಸ್.ವಿ. ದತ್ತ, ಶಾಸಕರಾಗಿ ನಿಭಾಯಿಸಿದ ಕಾರ್ಯ ರಾಜ್ಯದ ಜನರ ಗಮನ ಸೆಳೆದಿತ್ತು. ವಿಧಾನಸಭಾ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಸೋಲನ್ನು ಕಂಡಿದ್ದ ಇವರು ವಿಧಾನಪರಿಷತ್ ಮೂಲಕ ಶಾಸಕರಾಗುವ ಆಸೆ ಹೊತ್ತಿದ್ದರು.

ಆದರೆ ಧರ್ಮೇಗೌಡರಿಗೆ ವಿಧಾನಪರಿಷತ್ ಗೆ ಜೆಡಿಎಸ್ ಮಣೆ ಹಾಕಿದ್ದರಿಂದ ಬೇಸರಗೊಂಡಿರುವ ದತ್ತಾ, ಇಂದು ದೇವೇಗೌಡರನ್ನು ಭೇಟಿಯಾಗಿದ್ದರು. ‘ಪಕ್ಷದ ನಿಷ್ಠಾವಂತನಾದ ನನ್ನ ಸೋಲಿಗೆ ನೇರ ಕಾರಣರಾದ ಧರ್ಮೇಗೌಡರಿಗೆ ವಿಧಾನಪರಿಷತ್ ಟಿಕೆಟ್ ನೀಡಿರುವುದು ಸರಿಯಲ್ಲ’ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆನ್ನಲಾಗಿದೆ.

ಜೆಡಿಎಸ್ ಪಕ್ಷಕ್ಕಾಗಿ ನಾನು ಕಾಯಾ-ವಾಚಾ-ಮನಸಾ ದುಡಿದಿದ್ದೇನೆ, ಆದರೆ ನನಗೆ ಇಂದು ಅನ್ಯಾಯವಾಗಿದೆ. ರಾಮಕೃಷ್ಣ ಹೆಗಡೆಯವರ ಜೊತೆ ಅಂದೆ ನಾನು ಪಕ್ಷ ಬಿಟ್ಟಿದ್ದರೆ, ಇಷ್ಟೊತ್ತಿಗೆ ಉಪಮುಖ್ಯಮಂತ್ರಿ ಆಗಿರುತ್ತಿದ್ದೆ ಎಂದು ಹೇಳುವ ಮೂಲಕ ವೈ.ಎಸ್.ವಿ. ದತ್ತಾ, ಜೆಡಿಎಸ್ ದೊರೆಯುವ ಸೂಚನೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...