alex Certify
ಕನ್ನಡ ದುನಿಯಾ       Mobile App
       

Kannada Duniya

ಐಷಾರಾಮಿ ಬೈಕುಗಳನ್ನು ಕದ್ದು Olx ನಲ್ಲಿ ಮಾರಾಟ ಮಾಡುತ್ತಿದ್ದ ಭೂಪ

ದಿಢೀರ್ ಶ್ರೀಮಂತನಾಗಬೇಕೆಂಬ ಬಯಕೆಯಿಂದ ಯುವಕನೊಬ್ಬ ಐಷಾರಾಮಿ ಬೈಕ್ ಗಳನ್ನು ಕದ್ದು ಬಳಿಕ ನಕಲಿ ದಾಖಲೆ ಸೃಷ್ಟಿಸಿ olx ನಲ್ಲಿ ಮಾರಾಟ ಮಾಡುತ್ತಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಬೆಂಗಳೂರಿನ ಸುಂಕದಕಟ್ಟೆ ನಿವಾಸಿ 20 ವರ್ಷದ ಮಂಜುನಾಥ್ ಹೆಗ್ಡೆ ಬಂಧಿತ ಆರೋಪಿಯಾಗಿದ್ದು, ಈತ olx ನಲ್ಲಿ ಬರುತ್ತಿದ್ದ ಐಷಾರಾಮಿ ಬೈಕುಗಳ ಮಾರಾಟದ ಜಾಹೀರಾತನ್ನು ನೋಡಿ ಬೈಕ್ ಮಾಲೀಕರನ್ನು ಸಂಪರ್ಕಿಸುತ್ತಿದ್ದ.

ಬಳಿಕ ಟೆಸ್ಟ್ ರೈಡ್ ಮಾಡುವ ನೆಪದಲ್ಲಿ ಬೈಕ್ ತೆಗೆದುಕೊಂಡು ಪರಾರಿಯಾಗುತ್ತಿದ್ದ ಮಂಜುನಾಥ್, ನಂತರ ಅವುಗಳಿಗೆ ನಕಲಿ ದಾಖಲೆ ಸೃಷ್ಟಿಸಿ olx ನಲ್ಲೇ ಮಾರಾಟ ಮಾಡುತ್ತಿದ್ದ. ಇದೀಗ ಆತನನ್ನು ಬಂಧಿಸಿರುವ ಪೊಲೀಸರು 12 ಲಕ್ಷ ರೂ. ಮೌಲ್ಯದ 6 ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...