alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರಾವಣ ಮುಗಿದ ಬೆನ್ನಲ್ಲೇ ಹಸಿ ಮೊಟ್ಟೆ ತಿಂದು ಸಂಭ್ರಮಿಸಿದ ಯುವಕ

ಚಿಕ್ಕೋಡಿ: ಶ್ರಾವಣ ಮಾಸ ಹಿನ್ನಲೆಯಲ್ಲಿ ಕಳೆದ ಒಂದು ತಿಂಗಳಿಂದ ಮಾಂಸಾಹರವನ್ನು ತ್ಯಜಿಸಿ, ಕಟ್ಟುನಿಟ್ಟಾಗಿ ಸಂಪ್ರದಾಯ ಆಚರಿಸಿದ ಯುವಕನೊಬ್ಬ, ಶಾವಣ ಮುಗಿದ ಸಂಭ್ರಮದಲ್ಲಿ ಒಂದೇ ಬಾರಿಗೆ 8 ಹಸಿ ಮೊಟ್ಟೆಗಳನ್ನು ಸೇವಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಬೆಳಗಾವಿಯ ಚಿಕ್ಕೋಡಿ ತಾಲೂಕಿನ ರಾಜು ಮುತ್ತಾ ಎಂಬ ಯುವಕ ಶ್ರಾವಣ ಮಾಸದ ವೇಳೆ ತನ್ನ ಸ್ನೇಹಿತರೊಂದಿಗೆ ಸವಾಲು ಹಾಕಿದ್ದನಂತೆ. ಶ್ರಾವಣ ಮುಗಿದ ಬಳಿಕ ಹಸಿ ಮೊಟ್ಟೆ ತಿನ್ನುವುದಾಗಿ ಹೇಳಿದ್ದನಂತೆ. ಅದರಂತೆ ಈಗ ಶ್ರಾವಣ ಮುಗಿದ ಹಿನ್ನಲೆಯಲ್ಲಿ ಅಂಗಡಿಗೆ ಬಂದ ಯುವಕ ಏಕಾಏಕಿ 8 ಹಸಿ ಮೊಟ್ಟೆಗಳನ್ನೇ ಒಡೆದು ತಿಂದಿದ್ದಾನೆ.

ಈ ದೃಶ್ಯವನ್ನು ಸೆರೆಹಿಡಿದಿರುವ ರಾಜು ಮುತ್ತಾ ಸ್ನೇಹಿತರು ಇದನ್ನು ಈಗ ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...