alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿಯನ್ನು ಚುಡಾಯಿಸಿದ ಯುವಕನಿಗೆ ಚಪ್ಪಲಿ ಏಟು

ಹಾವೇರಿ: ಯುವತಿಯನ್ನು ಚುಡಾಯಿಸಿದ ಕಾರಣಕ್ಕೆ ಯುವಕನನ್ನು ಯುವತಿ ಹಾಗೂ ಆಕೆ ಮನೆಯವರು ಸೇರಿ ನಡು ರಸ್ತೆಯಲ್ಲೇ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹಾವೇರಿ ಜಿಲ್ಲೆ ಕಾವೇರಿ ಲಾಡ್ಜ್ ಮುಂಭಾಗದಲ್ಲಿ ನಡೆದಿದೆ.

ಹಾನಗಲ್ ತಾಲೂಕಿನ ನಾಗರಾಜ್​ ಥಳಿತಕ್ಕೊಳಗಾದ ಯುವಕ. ಕಾಲೇಜಿಗೆ ಹೋಗುತ್ತಿದ್ದ ಯುವತಿಯನ್ನು ನಾಗರಾಜ್ ಚುಡಾಯಿಸುತ್ತಿದ್ದ. ಇದರಿಂದ ಬೇಸತ್ತ ಯುವತಿ, ನಾಗರಾಜ್ ವಿರುದ್ಧ ಮನೆಯಲ್ಲಿ ದೂರು ನೀಡಿದ್ದಳು. ಯುವತಿಯ ಪೋಷಕರು ನಾಗರಾಜನಿಗೆ ಎಚ್ಚರಿಕೆ ನೀಡಿದ್ದರು.

ಆದರೂ ಲೆಕ್ಕಿಸದ ನಾಗರಾಜ, ಯುವತಿಯನ್ನು ಮತ್ತೆ ಚುಡಾಯಿಸಿದ್ದಾನೆ. ತಕ್ಷಣವೇ ಸ್ಥಳಕ್ಕೆ ಬಂದ ಯುವತಿ ಪೋಷಕರು ನಾಗರಾಜನನ್ನು ಹಿಡಿದು ಥಳಿಸಿದ್ದಾರೆ. ಯುವತಿ, ಕೈಯಲ್ಲಿ ಚಪ್ಪಲಿ ಹಿಡಿದು ಯುವಕನ ಮುಖ ಮತ್ತು ಹಣೆಗೆ ರಕ್ತ ಬರುವಂತೆ ಹೊಡೆದು ರೌದ್ರಾವತಾರ ತೋರಿದ್ದಾಳೆ.

ಮನೆಯವರು ಹಾಗೂ ಯುವತಿ ಹೊಡೆತಕ್ಕೆ ಕಂಗಾಲಾದ ನಾಗರಾಜ್​ ನಾನೇನು ತಪ್ಪು ಮಾಡಿಲ್ಲ, ಊರು ಬಿಟ್ಟು ಹೋಗುವುದಾಗಿ ಕೈಮುಗಿದರೂ ಯುವತಿ ಕಡೆಯವರ ಆಕ್ರೋಶ ಕಡಿಮೆಯಾಗಿರಲಿಲ್ಲ. ಸ್ಥಳದಲ್ಲಿ ಸೇರಿದ ಜನರು ನಾಗರಾಜ್ ನನ್ನು ಯುವತಿ ಹಾಗೂ ಆಕೆ ಮನೆಯವರಿಂದ ಬಿಡಿಸಿ ಕಳುಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...