alex Certify
ಕನ್ನಡ ದುನಿಯಾ       Mobile App
       

Kannada Duniya

ಹಳೆ ವಾಹನ ಮಾರಾಟ ಮಾಡುವವರಿಗೊಂದು ಸಿಹಿ ಸುದ್ದಿ

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತಿಸಿದೆ. ಈ ಹಿನ್ನೆಲೆಯಲ್ಲಿ ನಿಮ್ಮ ಬಳಿ ಪೆಟ್ರೋಲ್-ಡೀಸೆಲ್ ನ ಯಾವುದಾದರೂ ಹಳೆಯ ವಾಹನಗಳಿದ್ರೆ ಅವುಗಳನ್ನ ಎಕ್ಸ್ ಚೇಂಜ್ ಮಾಡಿ ರಿಯಾಯಿತಿ ದರದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 9200 ಕೋಟಿ ಹಣವನ್ನು ಮೀಸಲಿಟ್ಟಿದೆ.

2 ವೀಲರ್ ಎಲೆಕ್ಟ್ರಿಕಲ್ ಬೈಕ್ ಬೆಲೆ 1 ಅಥವಾ 1.5 ಲಕ್ಷವಿದ್ದಲ್ಲಿ, ಆ ಬೈಕ್ ಖರೀದಿಸಿದ ವ್ಯಕ್ತಿಗೆ 20 ರಿಂದ 30 ಸಾವಿರ ರಿಯಾಯಿತಿ ದೊರೆಯಲಿದೆ. ಅಥವಾ 5 ಲಕ್ಷದ ತ್ರಿ ವೀಲರ್ ಕೊಂಡಲ್ಲಿ 75 ಸಾವಿರ, 3 ಲಕ್ಷದ ತ್ರಿ ವೀಲರ್ ಕೊಂಡಲ್ಲಿ 35 ಸಾವಿರ ರಿಯಾಯಿತಿ ಸಿಗಲಿದೆ. ಅಲ್ಲದೆ 15 ಲಕ್ಷದ ಕಾರು ಕೊಂಡಲ್ಲಿ ಬರೋಬ್ಬರಿ 2 ಲಕ್ಷದ ರಿಯಾಯಿತಿ ಸಿಗಲಿದೆ ಅಂತಾ ಹೇಳಲಾಗ್ತಿದೆ. ಇನ್ನು ಭಾರಿ ಮೊತ್ತದ ಎಲೆಕ್ಟ್ರಿಕಲ್ ಬಸ್ ಮತ್ತು ಟ್ರಕ್ ಗಳನ್ನು ಕೊಳ್ಳುವ ಗ್ರಾಹಕರಿಗೆ 50 ಲಕ್ಷದವರೆಗೂ ರಿಯಾಯಿತಿ ನೀಡುವುದಾಗಿ ತಿಳಿಸಲಾಗಿದೆ.

ಕೇಂದ್ರ ಸರ್ಕಾರ ಎಲೆಕ್ಟ್ರಿಕಲ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಸಾವಿರಾರು ಕೋಟಿ ಹಣವನ್ನು ವ್ಯಯಿಸುತ್ತಿದೆ. ಈ ಮೂಲಕ ಇ-ವಾಹನಗಳ ನಿರ್ಮಾಣವನ್ನು ಹೆಚ್ಚಿಸಲು ವಾಹನ ತಯಾರಕರಿಗೆ ಸರ್ಕಾರ ಉತ್ತೇಜಿಸುತ್ತಿದೆ.

ಹಾಗೆಯೇ ಹಳೆಯ ವಾಹನಗಳನ್ನು ತೆಗೆದು ಮಾಲಿನ್ಯ ನಿಯಂತ್ರಣ ಮತ್ತು ಸಂಚಾರ ದಟ್ಟಣೆ ಇಳಿಸಲು ಕೇಂದ್ರ ಸರ್ಕಾರ ಚಿಂತಿಸಿದೆ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನ ಉತ್ತೇಜಿಸುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...