alex Certify
ಕನ್ನಡ ದುನಿಯಾ       Mobile App
       

Kannada Duniya

‘ವಾಸಿಯಾಗದ ಕಾಯಿಲೆಗಳಿಗೂ ಯೋಗದಲ್ಲಿದೆ ಪರಿಹಾರ’

ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿರುವ ಅನೇಕ ವಾಸಿಯಾಗದ ಕಾಯಿಲೆಗಳಿಗೆ ಯೋಗದಲ್ಲಿ ಪರಿಹಾರವಿದೆ ಎಂದು ಮೈಸೂರು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.

ಇಂದು ಶಿವಮೊಗ್ಗ ನಗರದ ಶಿವಗಂಗಾ ಕೇಂದ್ರದಲ್ಲಿ 5.6 ಅಡಿ ಎತ್ತರದ ಯೋಗ ಮಹರ್ಷಿ ಪತಂಜಲಿ ಮಹಾಸ್ವಾಮಿ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಂತರ ಮಾತನಾಡಿದ ಅವರು, ಯೋಗದ ಬಗ್ಗೆ ದೇಶ, ವಿದೇಶಗಳಲ್ಲೂ ಕೂಡಾ ಇಂದು ಜಾಗೃತಿ ಮೂಡುತ್ತಿದೆ ಎಂದರು.

ಯೋಗ ಕೇವಲ ಶರೀರಕ್ಕೆ ಮಾತ್ರ ಆರೋಗ್ಯವನ್ನು ನೀಡದೇ ಮಾನಸಿಕ ಆರೋಗ್ಯವನ್ನು ನೀಡುವಲ್ಲಿಯೂ ಸಹಕಾರಿಯಾಗಿದೆ. ಯೋಗದಿಂದ ಮಾನಸಿಕ ಶುದ್ದಿ, ಚಂಚಲತೆ ದೂರವಾಗುತ್ತದೆ ಎಂದರು.

ಯೋಗದ ಬಗ್ಗೆ ಒಂದು ಕಾಲದಲ್ಲಿ ಮೂಗು ಮುರಿಯುತ್ತಿದ್ದವರು ಇಂದು ಮೂಗು ಹಿಡಿದು ಯೋಗ ಮಾಡುತ್ತಿದ್ದಾರೆ. ಮೂಗು ಹಿಡಿದು ಯೋಗ ಮಾಡಿದವರು ದೇಶದ ರಾಯಭಾರಿಯಾಗುತ್ತಾರೆ ಎಂಬುದಕ್ಕೆ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರೇ ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು.

ಯೋಗದಿಂದ ಶಾರೀರಿಕ ಆರೋಗ್ಯ ವೃದ್ಧಿಯಾಗುತ್ತದೆ. ಕೃತಕವಾಗಿ ನಾವು ಏನೇ ಸೌಂದರ್ಯವರ್ಧಕಗಳನ್ನು ಲೇಪಿಸಿಕೊಂಡರೂ ಸಹ ಮುಖದಲ್ಲಿ ಕಾಂತಿ, ತೇಜಸ್ಸು ಬರಲು ಸಾಧ್ಯವಿಲ್ಲ. ಆದರೆ ಯೋಗ ಮಾಡುವವನ ಮುಖದಲ್ಲಿ ನೈಸರ್ಗಿಕವಾಗಿ ತೇಜಸ್ಸು ಹೊರಹೊಮ್ಮುತ್ತದೆ ಎಂದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...