alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಧಮ್ಕಿಗೆ ಬಗ್ಗುವವನು ನಾನಲ್ಲ-ಸಿಎಂಗೆ ಯಡಿಯೂರಪ್ಪ ತಿರುಗೇಟು

ಬೆಂಗಳೂರು: ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಎಚ್ಚರಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ನೀವು ರಾಜ್ಯದಲ್ಲಿ ಅಧಿಕಾರದಲ್ಲಿದ್ದರೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವವರು ನಾವು. ನಿಮ್ಮ ಧಮ್ಕಿಗಳಿಗೆ ನಾನು ಬಗ್ಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಸಿಎಂ ಖಡಕ್ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ಓರ್ವ ಮಾಜಿ ಸಿಎಂ ಆಗಿ, ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷನಾಗಿ ನಾನು ಹೇಗೆ ಮಾತನಾಡಬೇಕು, ನನ್ನ ಇತಿಮಿತಿಯೇನು ಎಂಬುದು ನನಗೆ ಚೆನ್ನಾಗಿಯೇ ಗೊತ್ತು. ಹದ್ದುಮೀರಿ ಮಾತನಾಡುತ್ತಿರುವುದು ನೀವು, ನಿಮ್ಮ ಧಮ್ಕಿಗಳಿಗೆಲ್ಲ ಬಗ್ಗುವವನು ನಾನಲ್ಲ ಎಂದು ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ನಿಮ್ಮ ಕುಟುಂಬ ಮಾಡಿಕೊಂಡಿರುವ ಭೂ ಕಬಳಿಕೆ ಬಗ್ಗೆ ಮೊದಲು ಉತ್ತರವನ್ನು ನೀಡಿ. ರಾಜ್ಯದಲ್ಲಿ ನಿಮ್ಮ ಕುಟುಂಬ ಮಾಡುತ್ತಿರುವಷ್ಟು ಭೂ ಕಬಳಿಕೆಗಳನ್ನು, ಜನತೆಗೆ ಮಾಡುತ್ತಿರುವ ವಂಚನೆಗಳನ್ನು ಬೇರಾರೂ ಮಾಡಿಲ್ಲ. ಈಗ ನಮ್ಮ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತ, ಜನರಲ್ಲಿ ಗೊಂದಲ ಸೃಷ್ಠಿಸಿ, ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದೀರಾ. ನಾವು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ವೇಳೆ ನಿಮ್ಮ ರೀತಿ ಸೇಡಿನ ರಾಜಕಾರಣವನ್ನು ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಂಜೆ ನಾಲ್ಕು ಗಂಟೆಗೆ ಬಿಜೆಪಿ ತುರ್ತು ಸುದ್ದಿಗೋಷ್ಠಿಯನ್ನು ಕರೆದಿದ್ದು, ಈ ವೇಳೆ ಹೆಚ್.ಡಿ.ಕೆ. ಕುಟುಂಬದ ಭೂ ಕಬಳಿಕೆ ಕುರಿತಾದ ಪ್ರಮುಖ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...