alex Certify
ಕನ್ನಡ ದುನಿಯಾ       Mobile App
       

Kannada Duniya

ಭಾಷಣದ ವೇಳೆ ಭಾವುಕರಾದ ಯಡಿಯೂರಪ್ಪ

ಸಿಎಂ ಯಡಿಯೂರಪ್ಪ ವಿಧಾನಸಭೆ ಕಲಾಪದಲ್ಲಿ ಭಾಷಣ ಶುರು ಮಾಡಿದ್ದಾರೆ. ಭಾಷಣದ ಆರಂಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಾಧ್ಯಕ್ಷ ಅಮಿತ್ ಶಾರ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಪರಿವರ್ತನಾ ಯಾತ್ರೆಯಲ್ಲಿ ಸಿಕ್ಕ ಜನ ಬೆಂಬಲವನ್ನು ನಾನು ಮರೆಯಲು ಸಾಧ್ಯವಿಲ್ಲ. ಎಲ್ಲ ಕಾರ್ಯಕರ್ತರಿಗೂ ಹಾಗೂ ಜನರಿಗೆ ಧನ್ಯವಾದ ಸಲ್ಲಿಸುತ್ತೇನೆಂದು ಯಡಿಯೂರಪ್ಪ ಭಾಷಣದಲ್ಲಿ ಹೇಳಿದ್ದಾರೆ.

40 ಇದ್ದ ನಮ್ಮ ಶಾಸಕರ ಸಂಖ್ಯೆ 104ಕ್ಕೇರಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಗೆ ಜನಾದೇಶ ಸಿಕ್ಕಿಲ್ಲ. ಅಪ್ಪನಾಣೆ ಮುಖ್ಯಮಂತ್ರಿಯಾಗಲ್ಲ ಎಂಬ ಮಾತು ಜನರಿಗೆ ಕಿರಿಕಿರಿ ನೀಡಿತ್ತು. ಆದ್ರೆ ಜನಾದೇಶದ ನಂತ್ರ ಇಬ್ಬರೂ ಒಂದಾದ್ರು ಎಂದು ಯಡಿಯೂರಪ್ಪ ಜೆಡಿಎಸ್-ಕಾಂಗ್ರೆಸ್ ನಡೆಯನ್ನು ದೋಷಿಸಿದ್ರು.

ರಾಜ್ಯಪಾಲರು ಅತಿ ದೊಡ್ಡ ಪಕ್ಷಕ್ಕೆ ಸರ್ಕಾರ ರಚನೆಗೆ ಅವಕಾಶ ನೀಡಿದ್ರು. ಸಿಎಂ ಆಗಿ ಅಧಿಕಾರ ಸ್ವೀಕರಿಸಿದೆ ಎಂದ ಯಡಿಯೂರಪ್ಪ ರೈತರ ಬಗ್ಗೆ ಮಾತನಾಡ್ತಾ ಭಾವುಕರಾದ್ರು. ರೈತರಿಗಾಗಿ ನನ್ನ ಜೀವನವನ್ನೇ ಮುಡುಪಾಗಿಟ್ಟಿದ್ದೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...