alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ

ನಿರೀಕ್ಷೆಯಂತೆ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ವಿಶ್ವಾಸಮತ ಯಾಚನೆಗೂ ಮುನ್ನವೇ ಕಲಾಪದಲ್ಲಿ ಮಾಜಿ ಸಿಎಂ ವಾಜಪೇಯಿಯಂತೆ ಭಾವುಕ ಭಾಷಣ ಮಾಡಿದ ಯಡಿಯೂರಪ್ಪ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಭಾಷಣದ ಕೊನೆಯಲ್ಲಿ ರಾಜೀನಾಮೆ ಘೋಷಣೆ ಮಾಡಿದ ಯಡಿಯೂರಪ್ಪ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

ವಿಧಾನಸಭೆ ಕಲಾಪದಲ್ಲಿ ಭಾಷಣ ಶುರು ಮಾಡಿದ ಯಡಿಯೂರಪ್ಪ ವಿಸ್ತಾರವಾಗಿ ಎಲ್ಲವನ್ನೂ ಹೇಳಿದ್ರು. ಭಾಷಣದ ಆರಂಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಾಧ್ಯಕ್ಷ ಅಮಿತ್ ಶಾರ ಬಗ್ಗೆ ಉಲ್ಲೇಖ ಮಾಡಿದ್ರು. ಪರಿವರ್ತನಾ ಯಾತ್ರೆಯಲ್ಲಿ ಸಿಕ್ಕ ಜನ ಬೆಂಬಲವನ್ನು ನಾನು ಮರೆಯಲು ಸಾಧ್ಯವಿಲ್ಲ. ಎಲ್ಲ ಕಾರ್ಯಕರ್ತರಿಗೂ ಹಾಗೂ ಜನರಿಗೆ ಧನ್ಯವಾದ ಸಲ್ಲಿಸುತ್ತೇನೆಂದು ಯಡಿಯೂರಪ್ಪ ಭಾಷಣದಲ್ಲಿ ಹೇಳಿದ್ರು.

40 ಇದ್ದ ನಮ್ಮ ಶಾಸಕರ ಸಂಖ್ಯೆ 104 ಕ್ಕೇರಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಗೆ ಜನಾದೇಶ ಸಿಕ್ಕಿಲ್ಲ. ಅಪ್ಪನಾಣೆ ಮುಖ್ಯಮಂತ್ರಿಯಾಗಲ್ಲ ಎಂಬ ಮಾತು ಜನರಿಗೆ ಕಿರಿಕಿರಿ ನೀಡಿತ್ತು. ಆದ್ರೆ ಜನಾದೇಶದ ನಂತ್ರ ಇಬ್ಬರೂ ಒಂದಾದ್ರು ಎಂದು ಯಡಿಯೂರಪ್ಪ ಜೆಡಿಎಸ್-ಕಾಂಗ್ರೆಸ್ ನಡೆಯನ್ನು ದೂಷಿಸಿದ್ರು.

ರಾಜ್ಯಪಾಲರು ಅತಿ ದೊಡ್ಡ ಪಕ್ಷಕ್ಕೆ ಸರ್ಕಾರ ರಚನೆಗೆ ಅವಕಾಶ ನೀಡಿದ್ರು. ಸಿಎಂ ಆಗಿ ಅಧಿಕಾರ ಸ್ವೀಕರಿಸಿದೆ ಎಂದ ಯಡಿಯೂರಪ್ಪ, ರೈತರ ಬಗ್ಗೆ ಮಾತನಾಡ್ತಾ ಭಾವುಕರಾದ್ರು. ರೈತರಿಗಾಗಿ ನನ್ನ ಜೀವನವನ್ನೇ ಮುಡುಪಾಗಿಟ್ಟಿದ್ದೇನೆ ಎಂದು ಯಡಿಯೂರಪ್ಪ ಹೇಳಿದ್ರು.

ನಾನು ಎಂದೂ ಕೈಕಟ್ಟಿ ಕೂತವನಲ್ಲ. ಜನರ ಸೇವೆಗೆ ನಿರಂತರ ಹೋರಾಟ ನಡೆಸಿದ್ದೇನೆ ಎಂದು ಯಡಿಯೂರಪ್ಪ ಭಾಷಣದಲ್ಲಿ ಹೇಳಿದ್ದಾರೆ. ರೈತರ, ನೇಕಾರರ ಸಾಲ ಮನ್ನಾ ಮಾಡಬೇಕು. ನೀರಿನ ಸಮಸ್ಯೆಗೆ ಮುಕ್ತಿ ಹಾಡಬೇಕು ಎಂಬುದು ನನ್ನ ಕನಸು. ನನ್ನ ಕರ್ತವ್ಯ ಮಾಡುತ್ತಿದ್ದೇನೆ. ರೈತರಿಗಾಗಿ ಜೀವನವನ್ನೇ ಮುಡುಪಾಗಿಟ್ಟಿದ್ದೇನೆ ಎಂದು ಯಡಿಯೂರಪ್ಪ ಹೇಳಿದ್ರು.

ರಾಜ್ಯದಲ್ಲಿ ಕಿತ್ತು ತಿನ್ನುತ್ತಿರುವ ಸಮಸ್ಯೆಗಳನ್ನು ನಿವಾರಣೆ ಮಾಡಬೇಕೆಂಬುದು ನನ್ನ ಗುರಿ. ರಾಜ್ಯದ ಅಭಿವೃದ್ಧಿ ಕನಸು ಕಂಡಿದ್ದೇನೆ ಎಂದ ಯಡಿಯೂರಪ್ಪ ಬಿಜೆಪಿ ಪ್ರಣಾಳಿಕೆಯಲ್ಲಿದ್ದ ಅಂಶಗಳನ್ನು ಉಲ್ಲೇಖ ಮಾಡಿದ್ರು.

ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಕೇಂದ್ರದಲ್ಲಿರುವ ಮೋದಿ ಸರ್ಕಾರ ಸಾಕಷ್ಟು ನೆರವು ನೀಡಿದೆ. ಇಲ್ಲಿಯೂ ಬಿಜೆಪಿ ಸರ್ಕಾರ ಬಂದಲ್ಲಿ ರಾಜ್ಯ ಮತ್ತಷ್ಟು ಅಭಿವೃದ್ಧಿ ಕಾಣಲಿದೆ ಎಂದು ಯಡಿಯೂರಪ್ಪ ಹೇಳಿದ್ರು. ಪ್ರತಿ ಬಾರಿಯೂ ನನಗೆ ಅಗ್ನಿ ಪರೀಕ್ಷೆಯೇ. ರಾಜ್ಯದ ಜನರೆಲ್ಲ ಒಮ್ಮೆ ಯೋಚನೆ ಮಾಡಿ ಎಂದು ಯಡಿಯೂರಪ್ಪ ಹೇಳಿದ್ರು. ಬಿಜೆಪಿಗೆ 113 ಸ್ಥಾನ ನೀಡಿದ್ದರೆ ರಾಜ್ಯದ ಚಿತ್ರಣವೇ ಬದಲಾಗ್ತಾಯಿತ್ತು ಎಂದ ಯಡಿಯೂರಪ್ಪ, ಸಿಎಂ ಆಗಿರಲಿ ಬಿಡಲಿ ರಾಜ್ಯದ ಅಭಿವೃದ್ಧಿಗೆ ನಾನು ಸಿದ್ಧ ಎಂದ್ರು.

ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ 28 ಕ್ಷೇತ್ರದಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ. ಇದು ಮೋದಿಗೆ ನಾವು ನೀಡುವ ಕೊಡುಗೆ ಎಂದ ಯಡಿಯೂರಪ್ಪ ರಾಜೀನಾಮೆ ನೀಡಿದ್ರು

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...