alex Certify
ಕನ್ನಡ ದುನಿಯಾ       Mobile App
       

Kannada Duniya

ಮಹದಾಯಿ ಕಾಂಗ್ರೆಸ್ ನ ಪಾಪದ ಕೂಸು: ಯಡಿಯೂರಪ್ಪ

ಶಿವಮೊಗ್ಗ : ಮಹದಾಯಿ ಕಾಂಗ್ರೆಸ್ ನ ಪಾಪದ ಕೂಸು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಶಿವಮೊಗ್ಗದ ಬಿಜೆಪಿ ಕಛೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ಯೋಜನೆಯ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಗೊಂದಲಗಳಿಗೆ ಕಾಂಗ್ರೆಸ್ ಸರ್ಕಾರವೇ ಕಾರಣವಾಗಿದೆ. ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಅಧಿಕಾರ ಅವಧಿಯಲ್ಲಿಯೇ ನ್ಯಾಯಾಧೀಕರಣ ಸ್ಥಾಪನೆಯಾಗಿತ್ತು. ಆಗ ರಾಜ್ಯದ ಕಾಂಗ್ರೆಸ್ಸಿಗರ್ಯಾರೂ ಇದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ. ಅಲ್ಲದೇ ಈಗಲೂ ಸೋನಿಯಾಗಾಂಧಿಯವರಾಗಲೀ, ರಾಹುಲ್ ಗಾಂಧಿಯವರಾಗಲೀ ಮಹದಾಯಿಗೆ ಸಂಬಂಧಿಸಿದಂತೆ ಏಕೆ ಮೌನ ವಹಿಸಿದ್ದಾರೆಂಬುದನ್ನು ಕಾಂಗ್ರೆಸ್ಸಿಗರೇ ಹೇಳಬೇಕು ಎಂದರು.

ಸೋನಿಯಾಗಾಂಧಿಯವರು ಈಗ ಗೋವಾದಲ್ಲಿಯೇ ಇದ್ದಾರೆ. ಅವರು ಇನ್ನು ನಾಲ್ಕು ದಿನ ಅಲ್ಲೇ ಇರುತ್ತಾರೆ. ಗೋವಾದ ಮುಖ್ಯಮಂತ್ರಿ ಜೊತೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುತ್ತಾರೆಂಬ ವಿಶ್ವಾಸ ನಮಗಿದೆ. ಹಾಗೆ ಮಾಡಿದರೆ ಕರ್ನಾಟಕದ ಜನರಿಗೆ ಅನುಕೂಲವಾಗುತ್ತದೆ. ಕಾಂಗ್ರೆಸ್ಸಿಗರು ಈ ಬಗ್ಗೆ ಒತ್ತಡ ಹೇರಬೇಕು ಎಂದರು.

ಮಹದಾಯಿ ನೀರನ್ನು ಕರ್ನಾಟಕಕ್ಕೆ ಹರಿಸುವ ಬಗ್ಗೆ ಗೋವಾ ಕಾಂಗ್ರೆಸ್ ಪ್ರತಿಭಟನೆ ನಡೆಸದೇ ಬೆಂಬಲ ಸೂಚಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2014ರಂದೇ ನ್ಯಾಯಾಲಯದ ತೀರ್ಪು ಬರುವವರೆಗೆ ಮಹಾದಾಯಿಯಿಂದ ಒಂದು ಹನಿ ನೀರು ಬಳಸುವುದಿಲ್ಲ ಎಂದು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.

ಅಭಿವೃದ್ದಿಯೇ ಬಿಜೆಪಿಯ ಅಜೆಂಡಾವಾಗಿದೆ. ಇದನ್ನೇ ನಾವು ಹಿಡಿದುಕೊಂಡು ಜನರ ಮುಂದೆ ಹೋಗಲಿದ್ದೇವೆ. ಕೇಂದ್ರ ಸರ್ಕಾರದ ಸಾಧನೆ ಹಾಗೂ ಪ್ರಧಾನಿ ಮೋದಿಯವರ ಸಾಧನೆಯ ಮೇರೆಗೆ ಕರ್ನಾಟಕ ಚುನಾವಣೆಗೆ ರಾಜ್ಯ ಬಿಜೆಪಿ ಜನರ ಮುಂದೆ ಹೋಗಲಿದೆ ಹಾಗೂ ಅಧಿಕಾರಕ್ಕೆ ಬರಲಿದೆ ಎಂದರು.

ಬಿಜೆಪಿಯ ಪರಿವರ್ತನಾ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ. 20 ಜಿಲ್ಲೆಯಲ್ಲಿ 141ಕ್ಷೇತ್ರಗಳು ಮುಗಿದಿದೆ. ಜನವರಿ 28ರಂದು ಬೆಂಗಳೂರಿಗೆ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾವೇಶದಲ್ಲಿ  ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಇಡೀ  224 ಕ್ಷೇತ್ರದಲ್ಲಿ ಪರಿವರ್ತನಾ ರ್ಯಾಲಿ ನಡೆಸಿದಾಗ ಜನರ ಸಮಸ್ಯೆ ಏನು ಕಂಡು ಬಂದಿದೆ ಅದನ್ನ ಪ್ರಧಾನಿ ಮೋದಿಯವರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಬಿಜೆಪಿ ಮುಂದಾಗಲಿದೆ ಎಂದು ವಿವರಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...