alex Certify
ಕನ್ನಡ ದುನಿಯಾ       Mobile App
       

Kannada Duniya

ಹಳೆ ಕಾರನ್ನ ಏರಿದ್ದಾರೆ ಯಡಿಯೂರಪ್ಪ…! ಕಾರಣವೇನು ಗೊತ್ತಾ…?

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿರುವ ಬಿ.ಎಸ್. ಯಡಿಯೂರಪ್ಪ, ಬಳಿಕ ರಾಜಭವನದಿಂದ ನೇರವಾಗಿ ವಿಧಾನಸೌಧಕ್ಕೆ ತೆರಳಿ ಮುಖ್ಯಮಂತ್ರಿ ಕಚೇರಿ ಪ್ರವೇಶಿಸಿದ್ದಾರೆ.

ಯಡಿಯೂರಪ್ಪನವರು ವಿಧಾನಸಭೆಗೆ ಬಂದ ವೇಳೆ ಹಿರಿಯ ಅಧಿಕಾರಿಗಳು ಅವರನ್ನು ಸ್ವಾಗತಿಸಿದ್ದು, ಬಳಿಕ ಅಧಿಕಾರಿಗಳ ಜೊತೆ ಔಪಚಾರಿಕ ಮಾತುಕತೆ ನಡೆಸಿದ್ದಾರೆ. ಅದರಲ್ಲೂ ಚುನಾವಣೆಪೂರ್ವದಲ್ಲಿ ಯಡಿಯೂರಪ್ಪನವರು ಮಾಡಿದ್ದ ಬಹು ದೊಡ್ಡ ಘೋಷಣೆಯಾದ ರೈತರ ಸಾಲ ಮನ್ನಾ ಕುರಿತು ಅಧಿಕಾರಿಗಳಿಂದ ಮುಖ್ಯಮಂತ್ರಿಗಳು ಸಮಗ್ರ ಮಾಹಿತಿ ಕೇಳಿದ್ದಾರೆ ಎನ್ನಲಾಗಿದೆ.

ಇದರ ಮಧ್ಯೆ ಯಡಿಯೂರಪ್ಪನವರು 2008 ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಳಸುತ್ತಿದ್ದ ಹಳೆಯ ಹೋಂಡಾ ಸಿ ಆರ್ ವಿ ಕಾರನ್ನೇ ಶಿಷ್ಟಾಚಾರ ಇಲಾಖೆಗೆ ಹೇಳುವ ಮೂಲಕ ತರಿಸಿಕೊಂಡಿದ್ದಾರೆ. ಅದೇ ಕಾರಿನಲ್ಲಿ ಮುಖ್ಯಮಂತ್ರಿಗಳು ಬಿಜೆಪಿ ಕಚೇರಿಗೆ ತೆರಳಿದ್ದಾರೆ. ಇದು ತಮ್ಮ ಅದೃಷ್ಟದ ಕಾರು ಎಂಬ ನಂಬಿಕೆ ಯಡಿಯೂರಪ್ಪನವರಲ್ಲಿದ್ದು, ಈ ಕಾರಣಕ್ಕಾಗಿಯೇ ಹಳೆ ಕಾರನ್ನೇ ಅವರು ತರಿಸಿಕೊಂಡಿದ್ದಾರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...