alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತ್ ಬಂದ್ ದುರುದ್ದೇಶಪೂರಿತ: ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ

ಬೆಂಗಳೂರು: ತೈಲ ಬೆಲೆ ಏರಿಕೆ ಖಂಡಿಸಿ, ಕಾಂಗ್ರೆಸ್ ಕರೆ ನೀಡಿರುವ ಭಾರತ್ ಬಂದ್ ದುರುದ್ದೇಶಪೂರಿತವಾದದ್ದು, ಇದು ದೇಶದ ಜನರ ದಾರಿತಪ್ಪಿಸುವ ತಂತ್ರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ಭಾರತ್ ಬಂದ್ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ತೈಲ ಬೆಲೆ ಏರಿಕೆಗೆ ಕಾರಣವೇನೆಂಬುದು ಇಡೀ ಜಗತ್ತಿಗೆ ಗೊತ್ತಿದೆ. ಹೀಗಿರುವಾಗ ವಿಪಕ್ಷಗಳು ಭಾರತ್ ಬಂದ್ ಗೆ ಕರೆ ನೀಡಿ, ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಿರುವುದು ವ್ಯವಸ್ಥಿತವಾಗಿ ಕೇಂದ್ರ ಸರ್ಕಾರದ ವಿರುದ್ಧ ನಡೆಸುತ್ತಿರುವ ಪಿತೂರಿಯಾಗಿದೆ.

ರಾಜ್ಯ ಸಮ್ಮಿಶ್ರ ಸರ್ಕಾರ ದುರುದ್ದೇಶಪೂರಿತವಾಗಿ ಇಂತಹ ಬಂದ್ ಗಳಿಗೆ ಬೆಂಬಲ ನೀಡಿ, ಜನರ ದಿಕ್ಕುತಪ್ಪಿಸುವ ಯತ್ನ ನಡೆಸುತ್ತಿದೆ. ಬಂದ್ ಮಾಡಲೇಬೇಕೆಂದರೆ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಬಂದ್ ಮಾಡಲಿ ಎಂದು ಹೇಳಿದರು.

ಇದೇ ವೇಳೆ ಸಂಸದ ಡಿ.ಕೆ. ಸುರೇಶ್, ಬಿ.ಎಸ್.ವೈ. ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದಿದ್ದಾರೆ ಎಂದು ಬಿಡುಗಡೆಗೊಳಿಸಿರುವ ಪತ್ರದ ಬಗ್ಗೆ ಮಾತನಾಡಿದ ಯಡಿಯೂರಪ್ಪ, ಯಾವನ್ರಿ ಸುರೇಶ್, ನಾನ್ಯಾಕೆ ಅವ್ನಿಗೆ ಉತ್ತರ ಕೊಡಬೇಕು…? ನಾನ್ಯಾವ ಪತ್ರವನ್ನೂ ಬರೆದಿಲ್ಲ. ಅವನೇ ಇದನ್ನೆಲ್ಲ ಮಾಡುತ್ತಿರುವುದು. ಇದೊಂದು ನಕಲಿ ಪತ್ರ ಎಂದು ಏಕವಚನದಲ್ಲಿ ಕಿಡಿಕಾರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...