alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯನ್ನೆಬ್ಬಿಸಿದೆ ಹೆಚ್.ಡಿ.ಕೆ. ನೀಡಿರುವ ಹೇಳಿಕೆ

ಮೈತ್ರಿಕೂಟ ಸರ್ಕಾರವನ್ನು ಉರುಳಿಸಲು ಈ ಹಿಂದಿನಿಂದಲೂ ನಡೆಯುತ್ತಿದ್ದ ಪ್ರಯತ್ನಗಳನ್ನು ಗಮನಿಸುತ್ತಲೇ ಬಂದಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಇದೀಗ ಈ ಕುರಿತು ನೀಡಿರುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯನ್ನೆಬ್ಬಿಸಿದೆ.

ಶುಕ್ರವಾರದಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ವೇಳೆ, ಶಾಸಕರುಗಳನ್ನು ಖರೀದಿಸುವ ಯತ್ನ ನಡೆಯುತ್ತಿದೆ ಎಂದು ಕುಮಾರಸ್ವಾಮಿಯವರು ಹೇಳಿದರಲ್ಲದೆ ಇದರ ಹಿಂದಿರುವ ಕಿಂಗ್ ಪಿನ್ ಗಳ್ಯಾರು ಎಂಬುದು ನನಗೆ ಗೊತ್ತಿದೆ ಎನ್ನುವ ಮೂಲಕ ಪರೋಕ್ಷವಾಗಿ ಮೂರ್ನಾಲ್ಕು ಮಂದಿಯ ಹೆಸರುಗಳನ್ನು ಉಲ್ಲೇಖಿಸಿದ್ದರು.

ಬೆಟ್ಟಿಂಗ್ ದಂಧೆಯಲ್ಲಿರುವ ಓರ್ವ ವ್ಯಕ್ತಿ ಸೇರಿದಂತೆ ಕೆಲ ದಂಧೆಕೋರರು ತಾವು ಅದರಿಂದ ಗಳಿಸಿರುವ ಕೋಟ್ಯಾಂತರ ರೂ. ಅಕ್ರಮ ಹಣವನ್ನು ಮೈತ್ರಿಕೂಟ ಸರ್ಕಾರ ಉರುಳಿಸಲು ಖರ್ಚು ಮಾಡಲು ಮುಂದಾಗಿದ್ದಾರೆ ಎಂದು ಕುಮಾರಸ್ವಾಮಿಯವರು ಆರೋಪಿಸಿದ್ದರು.

ಇದುವರೆಗೂ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿದ್ದ ಮಧ್ಯೆ, ಕುಮಾರಸ್ವಾಮಿಯವರು ಪ್ರಸ್ತಾಪಿಸಿದ ಹೊಸ ಹೆಸರುಗಳು ಕುತೂಹಲಕ್ಕೆಡೆ ಮಾಡಿದೆ.

ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಗುಪ್ತಚರ ಇಲಾಖೆಯಿಂದಲೇ ಈ ಮಾಹಿತಿ ದೊರೆತಿದೆ ಎನ್ನಲಾಗಿದ್ದು, ಇದನ್ನು ಆಧರಿಸಿಯೇ ಈ ಹೇಳಿಕೆ ನೀಡಿರುವ ಕಾರಣ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಬಯಕೆ ಹೊತ್ತಿರುವ ಯಡಿಯೂರಪ್ಪನವರು ತಮ್ಮದೇ ಮೂಲಗಳಿಂದ ಶಾಸಕರನ್ನು ಸೆಳೆಯುವ ಕಾರ್ಯಕ್ಕೆ ಕೈಹಾಕಿದರೆ ಎಂಬ ಪ್ರಶ್ನೆ ಈಗ ಮೂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...