alex Certify
ಕನ್ನಡ ದುನಿಯಾ       Mobile App
       

Kannada Duniya

ಕೈ ಮುಗಿದರೂ ಪ್ರತಿಕ್ರಿಯಿಸದ ಯಡಿಯೂರಪ್ಪ

BANGALORE - 03.05.2010 :  The Karnataka Chief Minister B.S. Yeddyurappa along with BJP state President K S Eswarappa, at South Graduate Constituency Election preparation meeting of the BJP, at Ullal in Bangalore on May 03, 2010.   Photo K Murali Kumar.ಮೈಸೂರಿನಲ್ಲಿಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಕಾರ್ಯ ವೈಖರಿ ವಿರುದ್ದ ತಿರುಗಿ ಬಿದ್ದಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಕಾರ್ಯಕಾರಿಣಿಗೆ ಗೈರು ಹಾಜರಾಗಲು ಚಿಂತನೆ ನಡೆಸಿದ್ದರಾದರೂ ವರಿಷ್ಟರ ಖಡಕ್ ಸೂಚನೆ ಹಿನ್ನಲೆಯಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆನ್ನಲಾಗಿದೆ.

ವೇದಿಕೆ ಮೇಲೂ ಯಡಿಯೂರಪ್ಪ ಹಾಗೂ ಈಶ್ವರಪ್ಪನವರ ನಡುವಿನ ಭಿನ್ನಮತ ಪ್ರತಿಫಲಿಸಿದೆ. ವೇದಿಕೆ ಮೇಲೇರಿದ ಈಶ್ವರಪ್ಪ, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಪಕ್ಷದ ರಾಜ್ಯ ಉಸ್ತುವಾರಿ ಮುರಳಿಧರ್ ರಾವ್ ಅವರಿಗೆ ನಮಸ್ಕರಿಸಿ ಬಳಿಕ ಮುರಳಿಧರ್ ರಾವ್ ಅವರ ಪಕ್ಕ ಕುಳಿತಿದ್ದ ಯಡಿಯೂರಪ್ಪನವರಿಗೆ ನಮಸ್ಕರಿಸಿದರೂ ಯಡಿಯೂರಪ್ಪನವರು ಮಾತ್ರ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಳಿಕ ಕೇಂದ್ರ ಸಚಿವ ಅನಂತ್ ಕುಮಾರ್ ಅವರಿಗೆ ನಮಸ್ಕರಿಸಿ ಈಶ್ವರಪ್ಪ ವೇದಿಕೆ ಮೇಲೆ ಆಸೀನರಾಗಿದ್ದಾರೆ.

ಕಾರ್ಯಕಾರಿಣಿ ಸಭೆಯಲ್ಲಿ ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶ ನೀಡಬಾರದೆಂದು ಕೇಂದ್ರ ವರಿಷ್ಟರು ನೀಡಿದ ಸೂಚನೆಯನ್ನು ಯಡಿಯೂರಪ್ಪ ಹಾಗೂ ಈಶ್ವರಪ್ಪ ಬಣಗಳಿಗೆ ಮುರಳಿಧರ್ ರಾವ್ ಮುಟ್ಟಿಸಿದ್ದು, ಆದರೆ ಯಡಿಯೂರಪ್ಪನವರ ಬಣಕ್ಕೆಪರೋಕ್ಷ ಟಾಂಗ್ ನೀಡುವಂತೆ ಕೆಲ ಪ್ಲೆಕ್ಸ್ ಗಳನ್ನು ಕಾರ್ಯಕಾರಿಣಿ ಸಭೆ ನಡೆಯುತ್ತಿರುವ ಸ್ಥಳದಲ್ಲಿ ಹಾಕಿದ್ದು, ಇವುಗಳನ್ನು ಬಳಿಕ ತೆರವುಗೊಳಿಸಲಾಗಿದೆ. ಸಂತೋಷವಿದ್ದರೆ ಜಯ ನಿಶ್ಚಿತ ಎಂಬ ಬರಹ ಈ ಪ್ಲೆಕ್ಸ್ ಗಳಲ್ಲಿದ್ದು, ಸಂತೋಷ್ ಜಿ ಪರವಾಗಿ ಈ ಪ್ಲೆಕ್ಸ್ ಹಾಕಲಾಗಿತ್ತೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...