alex Certify
ಕನ್ನಡ ದುನಿಯಾ       Mobile App
       

Kannada Duniya

‘ಸಂಘಟನೆ ಉಳಿಸೋಣ’ ಸಮಾವೇಶದಲ್ಲಿ ಗದ್ದಲ

eshwarappa_yeddyurappaಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಕಾರ್ಯವೈಖರಿಗೆ ತಿರುಗಿ ಬಿದ್ದಿರುವ ಪಕ್ಷದ ಪ್ರಮುಖ ನಾಯಕರು ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಸಂಘಟನೆ ಉಳಿಸೋಣ’ ಸಮಾವೇಶ ಹಮ್ಮಿಕೊಂಡಿದ್ದು, ಈ ವೇಳೆ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.

ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್ ಮಾತನಾಡುತ್ತಿರುವ ವೇಳೆ ಯಡಿಯೂರಪ್ಪನವರ ಕುರಿತು ಆಡಿದ ಮಾತಿಗೆ ಕೆರಳಿದವರೊಬ್ಬರು ಭಾನುಪ್ರಕಾಶ್ ವಿರುದ್ದ ವೇದಿಕೆ ಮುಂಭಾಗದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗ ಭಾನುಪ್ರಕಾಶ್ ಆತನನ್ನು ಹೊರ ಹಾಕುವಂತೆ ಸೂಚಿಸಿದ್ದು, ಈ ವೇಳೆ ತಳ್ಳಾಟ ನೂಕಾಟ ನಡೆದಿದೆ.

ಬಳಿಕ ಮುಂದುವರೆದು ಮಾತನಾಡಿದ ಭಾನುಪ್ರಕಾಶ್, ರಾಜಕಾರಣದಲ್ಲಿ ಇಂತವನ್ನೆಲ್ಲಾ ನಾವೂ ನೋಡಿದ್ದೇವೆ. ಸಮಾವೇಶಕ್ಕೆ ಆಗಮಿಸಿರುವ ಕಾರ್ಯಕರ್ತರು ಯಾವುದೇ ಗೊಂದಲಕ್ಕೊಳಗಾಗಬಾರದೆಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...