alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವಾಸಮತಯಾಚನೆ ಮುನ್ನವೇ ಸಿಎಂ ರಾಜೀನಾಮೆ?

ಯಡಿಯೂರಪ್ಪ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ ಶುರುವಾಗಿದೆ. ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯಲು ಬಿಜೆಪಿ ವಿಫಲವಾಗಿದೆ. ಯಡಿಯೂರಪ್ಪ ಬಿಜೆಪಿ ಹಿರಿಯ ನಾಯಕರ ಜೊತೆ ಈ ಬಗ್ಗೆ ಮಾತನಾಡಿದ್ದಾರೆ. ವಿಶ್ವಾಸಮತಯಾಚನೆಗೂ ಮುನ್ನವೇ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಲಿದ್ದಾರೆ ಎಂಬ ಆತಂಕ ಮನೆ ಮಾಡಿದೆ. ಆದ್ರೆ ದುಡುಕಬೇಡಿ ಎಂದು ಹೈಕಮಾಂಡ್ ಸಲಹೆ ನೀಡಿದೆ ಎನ್ನಲಾಗ್ತಿದೆ.

ಇನ್ನು ನಾಪತ್ತೆಯಾಗಿದ್ದ ಮಸ್ಕಿ ಶಾಸಕ ಪ್ರತಾಪ್ ಗೌಡ ಮನಸ್ಸು ಬದಲಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಬಿಜೆಪಿಗೆ ಚಳ್ಳೆಹಣ್ಣು ತಿನ್ನಿಸಿ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದಾರೆ ಎನ್ನಲಾಗ್ತಿದೆ. ಇದ್ರ ಜೊತೆ ಪತ್ತೆಯಾಗಿದ್ದ ಆನಂದ್ ಸಿಂಗ್ ಮತ್ತೆ ನಾಪತ್ತೆಯಾಗಿದ್ದಾರೆ. ಯಾವ ಕಾರಣಕ್ಕೆ ಆನಂದ್ ಸಿಂಗ್ ನಾಪತ್ತೆಯಾಗ್ತಿದ್ದಾರೆಂಬ ಪ್ರಶ್ನೆಗೂ ಉತ್ತರ ಸಿಗ್ತಿಲ್ಲ.

ಈ ಮಧ್ಯೆ ಬಿಜೆಪಿ ನಾಯಕರ ಮತ್ತೊಂದು ಆಡಿಯೋ ರಿಲೀಸ್ ಆಗಿದೆ. ಮುರಳಿಧರ್ ರಾವ್ ಹಾಗೂ ಶ್ರೀರಾಮುಲು ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಜೊತೆ ಮಾತುಕತೆ ನಡೆಸಿದ ಆಡಿಯೋ ಬಿಡುಗಡೆಯಾಗಿದೆ. 25 ಕೋಟಿ ನೀಡುವುದಾಗಿ ಶ್ರೀರಾಮುಲು ಹಾಗೂ ಮುರಳಿಧರ್ ರಾವ್ ಪಾಟೀಲ್ ಗೆ ಆಮಿಷವೊಡ್ಡಿದ ಆಡಿಯೋ ಇದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...