alex Certify
ಕನ್ನಡ ದುನಿಯಾ       Mobile App
       

Kannada Duniya

ತರಾತುರಿಯಲ್ಲಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸುತ್ತಿರುವುದೇಕೆ?

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ. ನಾಳೆ ಬೆಳಿಗ್ಗೆ 9-30 ಕ್ಕೆ ಯಡಿಯೂರಪ್ಪನವರೊಬ್ಬರೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆಂದು ಹೇಳಲಾಗಿದೆ.

ತಮ್ಮ ಪಕ್ಷ ಬಹುಮತ ಗಳಿಸಲಿದ್ದು, ಮೇ 17 ರಂದು ಪಕ್ಷದ ರಾಷ್ಟ್ರ ನಾಯಕರ ಸಮ್ಮುಖದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸುವುದಾಗಿ ಮತದಾನಕ್ಕೂ ಮುನ್ನವೇ ಹೇಳಿದ್ದ ಯಡಿಯೂರಪ್ಪನವರು, ಫಲಿತಾಂಶದ ಬಳಿಕ ಯಾವುದೇ ಪಕ್ಷಕ್ಕೆ ಬಹುಮತ ಲಭಿಸದ ಕಾರಣ ನಿರಾಸೆಯನ್ನನುಭವಿಸಿದ್ದರು.

ಅದರಲ್ಲೂ ಅತಂತ್ರ ವಿಧಾನಸಭೆ ಸೃಷ್ಟಿಯಾಗುತ್ತಿದ್ದಂತೆಯೇ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಉದ್ದೇಶದಿಂದ ಕಾಂಗ್ರೆಸ್, ಜೆಡಿಎಸ್ ಗೆ ತನ್ನ ಬೆಂಬಲ ಘೋಷಿಸಿತೋ ಯಡಿಯೂರಪ್ಪನವರ ಮುಖ್ಯಮಂತ್ರಿ ಸ್ಥಾನದ ಕನಸಿಗೆ ತಣ್ಣೀರೆರೆಚಿದಂತಾಗಿತ್ತು. ಯಾವಾಗ ಬಿಜೆಪಿ ರಾಷ್ಟ್ರ ನಾಯಕರು ಅಖಾಡಕ್ಕಿಳಿದರೋ ಯಡಿಯೂರಪ್ಪನವರ ಕನಸು ಮತ್ತೆ ಗರಿಗೆದರಿದ್ದು, ರಾಜ್ಯಪಾಲರನ್ನು ಬಳಸಿಕೊಂಡು ರಾಜ್ಯದಲ್ಲಿ ಬಿಜೆಪಿ ಈಗ ಅಧಿಕಾರಕ್ಕೇರುತ್ತಿದೆ.

ಇದಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಬಹುದೆಂಬ ಹಿನ್ನಲೆಯಲ್ಲಿ ಹಾಗೂ ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಬಹುದೆಂಬ ಕಾರಣಕ್ಕೆ ಯಡಿಯೂರಪ್ಪನವರು ತರಾತುರಿಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಭಾರೀ ಜನಸ್ತೋಮದ ಮಧ್ಯೆ ಕಂಠೀರವ ಕ್ರೀಡಾಂಗಣದಲ್ಲಿ ಅಧಿಕಾರ ಸ್ವೀಕರಿಸಬೇಕೆಂಬ ಬಯಕ್ಕೆ ಹೊಂದಿದ್ದ ಯಡಿಯೂರಪ್ಪನವರು ಅನಿವಾರ್ಯ ಕಾರಣಗಳಿಂದಾಗಿ ನಾಳೆ ಬೆಳಿಗ್ಗೆ 9-30 ಕ್ಕೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...