alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಸಿಎಂ ಯಡಿಯೂರಪ್ಪಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹೀಗೆ ಹೇಳಲು ಕಾರಣವೇನು?

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನಮ್ಮ ಕುಟುಂಬದ ಬಗ್ಗೆ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು, ನಮ್ಮ ವಿರುದ್ಧ ಅನಗತ್ಯವಾಗಿ ಅಪ್ಪ-ಮಕ್ಕಳು ಲೂಟಿಕೋರರು ಎಂಬ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಯಡಿಯೂರಪ್ಪ ಮೊದಲು ಮಾತಿನ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಬೇಕು ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಮಾಜಿ ಸಚಿವ ಎ. ಮಂಜು ತಮ್ಮ ಕುಟುಂಬದ ವಿರುದ್ಧ ಮಾಡಿರುವ ಭೂ ಕಬಳಿಕೆ ಆರೋಪ ಹಿನ್ನಲೆಯಲ್ಲಿ ಬಿ.ಎಸ್. ಯಡಿಯೂರಪ್ಪ ನಡೆಸುತ್ತಿರುವ ವಾಗ್ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಪರ್ಸಂಟೇಜ್ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು…? ಎಂಟು ಪರ್ಸಂಟ್, ಹತ್ತು ಪರ್ಸಂಟ್ ವ್ಯವಸ್ಥೆ ಆರಂಭಿಸಿದ ಮಹಾನುಭಾವ ಯಡಿಯೂರಪ್ಪನವರು. ಪರ್ಸಂಟೇಜ್ ಸಿಸ್ಟಮ್ ನ ಜನಕ ಯಡಿಯೂರಪ್ಪ. ಹೀಗಿರುವಾಗ ನಮ್ಮ ವಿರುದ್ಧ ಪರ್ಸಂಟೇಜ್ ಆರೋಪ ಮಡುತ್ತಿರುವುದಾದರೂ ಏಕೆ ಎಂದು ಪ್ರಶ್ನಿಸಿದರು.

ನಮ್ಮ ಕುಟುಂಬದ ವಿರುದ್ಧ ಭೂ ಕಬಳಿಕೆ ಆರೋಪಗಳನ್ನು ಮಾಡಿ ಅಪ್ಪ-ಮಕ್ಕಳು ಲೂಟಿಕೋರರೆಂದು ಹೇಳುತ್ತಿದ್ದಾರೆ. ಆದರೆ ನಿಜವಾದ ಲೂಟಿಕೋರರು ಇವರು. ರಾಜ್ಯದಲ್ಲಿ ಸಂಪತ್ತನ್ನು ಲೂಟಿ ಮಾಡಿದ್ದು, ಭ್ರಷ್ಟಾಚಾರಗಳನ್ನು ನಡೆಸಿದ್ದು ಇವರು. ಯಾರು ಲೂಟಿಕೋರರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಶಿವರಾಮ ಕಾರಂತ ಬಡಾವಣೆ ಅವ್ಯವಹಾರ ನಡೆಸಿರುವುದು ಯಾರು?, ಸುಪ್ರೀಂ ಕೋರ್ಟ್ ನಿಂದ ಬಂದ ಆದೇಶ ಏನು…? ಜನರಿಗೆ ಎಲ್ಲವೂ ಗೊತ್ತು. ನಮ್ಮ ಕುಟುಂಬದ ಬಗ್ಗೆ, ಅಪ್ಪ-ಮಕ್ಕಳ ಬಗ್ಗೆ ಆರೋಪಗಳನ್ನು ಮಾಡುವುದನ್ನು ಯಡಿಯೂರಪ್ಪ ನಿಲ್ಲಿಸಲಿ ಎಂದರು.

ನಮ್ಮನ್ನು ಜೈಲಿಗೆ ಕಳಿಸುವುದಾಗಿ, ಡಿ.ಕೆ. ಶಿವಕುಮಾರ್ ಅವರನ್ನು ಜೈಲಿಗೆ ಅಟ್ಟುವುದಾಗಿ ಯಡಿಯೂರಪ್ಪ ಹೇಳುತ್ತಿದ್ದಾರೆ. ಆದರೆ ಭ್ರಷ್ಟಾಚಾರ ನಡೆಸಿ, ಮಾಡಬಾರದ್ದನ್ನು ಮಾಡಿ ಜೈಲಿಗೆ ಹೋಗಿ ಬಂದವರು ಇವರು. ಯಡಿಯೂರಪ್ಪನವರು ಗಾಜಿನ ಮನೆಯೊಳಗೆ ನಿಂತು ಕಲ್ಲು ಹೊಡೆಯುವ ಯತ್ನ ನಡೆಸುತ್ತಿದ್ದಾರೆ. ಅದರಿಂದ ತೊಂದರೆಯಾಗುವುದು ಅವರಿಗೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಯಡಿಯೂರಪ್ಪನವರಿಗೆ ಒಂದು ಎಚ್ಚರಿಕೆ ನೀಡುತ್ತಿದ್ದೇನೆ. ಅನಗತ್ಯ ಆರೋಪ, ಕುತಂತ್ರಗಳನ್ನು ಮಾಡಿ ನಮ್ಮನ್ನು ಕೆಣಕುವುದು ಸರಿಯಲ್ಲ. ನಾನು ತಾಳ್ಮೆಯಿಂದ ಇದ್ದೇನೆ… ಹೀಗೆಯೇ ಮಾತುಗಳು ಮುಂದುವರೆದರೆ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿರುವವರು ನಾವು. ನಾಳೆ ಏನು ಬೇಕಾದರೂ ಮಾಡುವ ಸಾಮರ್ಥ್ಯ ನಮಗೂ ಇದೆ ಎಂಬುದನ್ನು ಅರಿವಿನಲ್ಲಿಟ್ಟುಕೊಳ್ಳಿ. ವಯಸ್ಸಿನಲ್ಲಿ ಹಿರಿಯರಾಗಿರುವ ನೀವು ವಯಸ್ಸಿಗೆ ತಕ್ಕಂತೆ ಗಂಭೀರವಾಗಿ ಮಾತನಾಡುವುದನ್ನು ಕಲಿಯಿರಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...