alex Certify
ಕನ್ನಡ ದುನಿಯಾ       Mobile App
       

Kannada Duniya

ಕೆ.ಎಸ್. ಈಶ್ವರಪ್ಪಗೆ ಯಡಿಯೂರಪ್ಪ ಟಾಂಗ್

yeddi-eshwarappaಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಚಿವ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪನವರ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆ.

ಮಂಗಳವಾರದಂದು ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ಪದಾಧಿಕಾರಿಗಳ ನೇಮಕ ಕುರಿತಂತೆ ಯಡಿಯೂರಪ್ಪನವರು ತೆಗದುಕೊಂಡಿದ್ದ ಏಕಪಕ್ಷೀಯ ತೀರ್ಮಾನವನ್ನು ಈಶ್ವರಪ್ಪ ಸೇರಿದಂತೆ ಹಲವರು ಪ್ರಶ್ನಿಸಿದ್ದರೆ, ಈಶ್ವರಪ್ಪನವರು ಪ್ರತ್ಯೇಕವಾಗಿ ‘ಹಿಂದ’ ಸಭೆ ನಡೆಸುತ್ತಿರುವುದಕ್ಕೆ ಯಡಿಯೂರಪ್ಪನವರು ಆಕ್ಷೇಪಿಸಿದ್ದರು.

ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಯಡಿಯೂರಪ್ಪನವರು, ಯಾವುದೇ ನಾಯಕರು ಜಾತಿ ಸಭೆಗಳಲ್ಲಿ ಭಾಗವಹಿಸುವುದು ತಪ್ಪಲ್ಲ. ಆದರೆ ಸಂಘಟನೆಯನ್ನು ಮಾತ್ರ ಪಕ್ಷದ ಚೌಕಟ್ಟಿನಲ್ಲಿ ಮಾಡಬೇಕಾಗುತ್ತದೆ ಎಂದಿದ್ದಾರೆ. ಈಶ್ವರಪ್ಪನವರಿಗೂ ಇದನ್ನೇ ಸೂಚಿಸಿದ್ದೇನೆ ಎಂದಿರುವ ಯಡಿಯೂರಪ್ಪನವರು, ಪಕ್ಷದ ಮುಖಂಡರು ಇಂತಹ ಪ್ರತ್ಯೇಕ ಸಭೆಗಳಲ್ಲಿ ಭಾಗವಹಿಸದಂತೆ ಹೇಳಿರುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...