alex Certify
ಕನ್ನಡ ದುನಿಯಾ       Mobile App
       

Kannada Duniya

ಯಶ್-ರಾಧಿಕಾ ಈಗ ‘ಮಿಸ್ಟರ್ & ಮಿಸೆಸ್’….

yash-2

ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೇವಲ ರೀಲ್ ನಲ್ಲಿ ಮಾತ್ರವಲ್ಲ ರಿಯಲ್ ಆಗಿಯೂ ಮಿಸ್ಟರ್ & ಮಿಸೆಸ್ ಆಗಿದ್ದಾರೆ. ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನ ಗಾರ್ಡನ್ ನಲ್ಲಿ ಯಶ್-ರಾಧಿಕಾ ಮದುವೆ ಅದ್ಧೂರಿಯಾಗಿ ನೆರವೇರಿದೆ. ರಾಧಿಕಾಗೆ ಪ್ರಕೃತಿಯ ಮಡಿಲಲ್ಲಿ ಹೊಸ ಬಾಳಿಗೆ ಅಡಿ ಇಡಬೇಕೆಂಬ ಆಸೆಯಿತ್ತು. ಅವರ ಇಚ್ಛೆಯಂತೆ ಹೋಟೆಲ್ ನ ಉದ್ಯಾನವನದಲ್ಲಿ, 200 ವರ್ಷ ಹಳೆಯ ಮರಗಳ ನಡುವಲ್ಲಿ ವಿವಾಹ ಕಾರ್ಯ ನೆರವೇರಿದೆ.

ಅಭಿಜಿತ್ ಲಗ್ನದಲ್ಲಿ ಯಶ್, ರಾಧಿಕಾಗೆ ಮಾಂಗಲ್ಯ ಧಾರಣೆ ಮಾಡಿದ್ರು. ನಟ ಸುದೀಪ್, ಶಿವರಾಜ್ ಕುಮಾರ್, ಪುನೀತ್ ಸೇರಿದಂತೆ ಚಿತ್ರರಂಗ ಸ್ಟಾರ್ ಗಳೆಲ್ಲ ನವದಂಪತಿಗೆ ಶುಭಹಾರೈಸಿದ್ರು. ನಟಿ ಭಾರತಿ ವಿಷ್ಣುವರ್ಧನ್ ಸೇರಿದಂತೆ ಹಲವು ತಾರೆಯರು ಕೂಡ ಆಗಮಿಸಿದ್ರು. ಕಿರುತೆರೆಯ ನಟ ನಟಿಯರು ಕೂಡ ಅದ್ಧೂರಿ ಮದುವೆಗೆ ಸಾಕ್ಷಿಯಾದ್ರು. ಇನ್ನು ಮಾಜಿ ಸಿಎಂ ಎಸ್.ಎಂ.ಕೃಷ್ಣ ಸೇರಿದಂತೆ ಹಲವು ರಾಜಕೀಯ ಮುಖಂಡರು ಕೂಡ ಯಶ್-ರಾಧಿಕಾ ಮದುವೆಗೆ ಬಂದಿದ್ರು.

ಅತಿಥಿಗಳಿಗೆಲ್ಲ ಬಾಳೆ ಎಲೆಯಲ್ಲಿ ಭೂರಿ ಭೋಜನ ಉಣಬಡಿಸಲಾಗಿದೆ. ಡಿಸೆಂಬರ್ 11ರಂದು ಯಶ್-ರಾಧಿಕಾ ಜೋಡಿಯ ಆರತಕ್ಷತೆ ನಡೆಯಲಿದೆ. ಯಶ್ ಹಾಗೂ ರಾಧಿಕಾ ಇಬ್ಬರೂ ಕಿರುತೆರೆಯಿಂದ ಚಿತ್ರರಂಗಕ್ಕೆ ಎಂಟ್ರಿಯಾಗಿ ಸಾಕಷ್ಟು ಯಶಸ್ಸು ಗಳಿಸಿದ್ದಾರೆ. ಜೊತೆಯಾಗಿ ನಟಿಸುತ್ತಲೇ ಇವರು ಪ್ರೀತಿಯಲ್ಲಿ ಬಿದ್ದಿದ್ರು. ಕೆಲ ದಿನಗಳ ಹಿಂದೆ ಗೋವಾದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಕಾರ್ಯ ನೆರವೇರಿತ್ತು. ಇದೀಗ ಈ ತಾರಾ ಜೋಡಿ ಮದುವೆಯ ಬಂಧನದಲ್ಲಿ ಒಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...