alex Certify
ಕನ್ನಡ ದುನಿಯಾ       Mobile App
       

Kannada Duniya

ಯಶ್- ರಾಧಿಕಾ ಪಂಡಿತ್ ನಿಶ್ಚಿತಾರ್ಥಕ್ಕೆ ಸ್ಯಾಂಡಲ್ವುಡ್ ಗಣ್ಯರ ದಂಡು

Yash and Radhika Pandit to get engaged tomorrow!ರಾಕಿಂಗ್ ಸ್ಟಾರ್ ಯಶ್ ಅವರ ವಿವಾಹ ನಿಶ್ಚಿತಾರ್ಥ ಸಮಾರಂಭ ನಟಿ ರಾಧಿಕಾ ಪಂಡಿತ್ ರ ಜೊತೆ ಗೋವಾದಲ್ಲಿ ನಾಳೆ ನಡೆಯಲಿದೆ. ಈ ಸಮಾರಂಭದಲ್ಲಿ ಕುಟುಂಬ ವರ್ಗದವರು ಹಾಗೂ ಅತ್ಮೀಯ ಸ್ನೇಹಿತರು ಮಾತ್ರ ಪಾಲ್ಗೊಳ್ಳುತ್ತಿದ್ದಾರೆ.

ಗೋವಾದ ಅಜ್ಞಾತ ಸ್ಥಳದಲ್ಲಿ ನಡೆಯಲಿರುವ ನಿಶ್ಚಿತಾರ್ಥ ಸಮಾರಂಭದ ಸಿದ್ದತೆಗಾಗಿ ರಾಧಿಕಾ ಪಂಡಿತ್ ಅವರ ಕುಟುಂಬ ಸದಸ್ಯರು ಈಗಾಗಲೇ ಗೋವಾಕ್ಕೆ ತೆರಳಿದ್ದಾರೆನ್ನಲಾಗಿದ್ದು, ಇಂದು ಮಧ್ಯಾಹ್ನ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಶ್ ಅವರ ತಂದೆ ಅರುಣ್ ಕುಮಾರ್, ತಾಯಿ ಪುಷ್ಪಾ, ಸಹೋದರಿ ನಂದಿನಿ ಹಾಗೂ ನಂದಿನಿಯವರ ಪತಿ ತೆರಳಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಯಶ್ ಅವರ ತಾಯಿ ಪುಷ್ಪಾ ಅವರು, ಯಶ್ ಈ ಹಂತ ತಲುಪಲು ಅಭಿಮಾನಿಗಳೇ ಕಾರಣ. ವಿವಾಹ ದಿನಾಂಕ ಇನ್ನೂ ನಿಗದಿಯಾಗಿಲ್ಲವಾಗಿದ್ದು, ಬಳಿಕ ಎಲ್ಲರಿಗೂ ತಿಳಿಸುತ್ತೇವೆ ಎಂದು ಹೇಳಿದ್ದಾರೆ.

ಕ್ರೇಜಿ ಸ್ಟಾರ್ ರವಿಚಂದ್ರನ್, ನಿರ್ಮಾಪಕ ಕೆ. ಮಂಜು, ನಿರ್ದೇಶಕರಾದ ಮಹೇಶ್ ರಾವ್ ಸೇರಿದಂತೆ ಸ್ಯಾಂಡಲ್ವುಡ್ ನ ಹಲವು ಗಣ್ಯರು ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಳ್ಳಲು ಗೋವಾಕ್ಕೆ ತೆರಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...