alex Certify
ಕನ್ನಡ ದುನಿಯಾ       Mobile App
       

Kannada Duniya

ಯಾಗದಲ್ಲಿ ಮಾಂಸ, ಸೋಮರಸ ನೈವೇದ್ಯ ಮಾಡಿ ಸೇವನೆ

yaga m 4

ಶಿವಮೊಗ್ಗ: ಲೋಕಕಲ್ಯಾಣಾರ್ಥವಾಗಿ ವಿವಿಧ ಪೂಜೆ, ಹೋಮ ಹವನ, ಯಾಗ ಮಾಡುವ ಬಗ್ಗೆ ಸಾಮಾನ್ಯವಾಗಿ ಕೇಳಿರುತ್ತೀರಿ. ಆದರೆ, ಶಿವಮೊಗ್ಗ ಜಿಲ್ಲೆಯ ಮತ್ತೂರಿನಲ್ಲಿ ಲೋಕಕಲ್ಯಾಣದ ಹೆಸರಿನಲ್ಲಿ ಯಾಗದಲ್ಲಿ ಮೇಕೆಗಳನ್ನು ಆಹುತಿ ನೀಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಏಪ್ರಿಲ್ 22 ರಿಂದ 27 ರವರೆಗೆ ಮತ್ತೂರಿನ ತಮಿಳರ ಕ್ಯಾಂಪ್ ಬಳಿ ಲೋಕಕಲ್ಯಾಣಾರ್ಥ ಯಾಗ ನಡೆಸಲಾಗಿದ್ದು, ಈ ಸಂದರ್ಭದಲ್ಲಿ 8 ಮೇಕೆಗಳನ್ನು ಬೆಂಕಿಗೆ ಹಾಕಿ ಬಲಿ ಕೊಡಲಾಗಿದೆ. ಮಾಂಸ ನೈವೇದ್ಯ ಮಾಡಿ ತಿಂದಿದ್ದಲ್ಲದೇ, ಸೋಮರಸ ಪಾನೀಯ ಕುಡಿದಿದ್ದಾರೆ. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಕಟ್ಟಾ ಸಂಪ್ರದಾಯಸ್ಥರೆಂದು ಹೇಳಲಾಗುವ ಸಂಕೇತಿ ಬ್ರಾಹ್ಮಣ ಸಮುದಾಯದ ಹಲವು ಮುಖಂಡರು, ಹೀಗೆ ಪ್ರಾಣಿಬಲಿ ಕೊಟ್ಟು ಯಾಗ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಮತ್ತೂರಿನಲ್ಲಿ ನಡೆದ ಈ ಸೋಮಯಾಗದಲ್ಲಿ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ್ದ ಋತ್ವಿಜರು ಭಾಗವಹಿಸಿದ್ದು, ಇದಕ್ಕೆ ಬಹುತೇಕ ಸಂಕೇತಿ ಬ್ರಾಹ್ಮಣರು ವಿರೋಧ ವ್ಯಕ್ತಪಡಿಸಿದ್ದರು. ಆದರೂ, ಸುಸೂತ್ರವಾಗಿ ಯಾಗ ನಡೆಸಿ, ಮಾಂಸ ನೈವೇದ್ಯ ಮಾಡಿ ಅದನ್ನು ತಿಂದಿದ್ದಾರೆ. ಸೋಮರಸ ಕುಡಿದಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...