alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜವಂಶಸ್ಥರಿಂದ ಸಂಭ್ರಮದ ಸುದ್ದಿಗೋಷ್ಠಿ

ಬೆಂಗಳೂರು: ಯದುವೀರ್ ಒಡೆಯರ್ ಪತ್ನಿ ಮಹಾರಾಣಿ ತ್ರಿಷಿಕಾ ಕುಮಾರಿ ಸಿಂಗ್ ಅವರಿಗೆ ಗಂಡು ಮಗು ಜನಿಸಿರುವುದು, ಮೈಸೂರು ಅರಮನೆಯಲ್ಲಿ ಮಾತ್ರವಲ್ಲದೇ, ನಾಡಿನಲ್ಲಿಯೂ ಸಂತಸ ತಂದಿದೆ.

ಒಡೆಯರ್ ಕುಟುಂಬದಿಂದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಾಗಿದೆ. ತ್ರಿಷಿಕಾ ಕುಮಾರಿಗೆ ರಾತ್ರಿ 9.32 ಕ್ಕೆ ಪುನರ್ವಸು ನಕ್ಷತ್ರದಲ್ಲಿ ಗಂಡು ಮಗು ಜನಿಸಿದ್ದು, 3 ಕೆ.ಜಿ. ತೂಕವಿದೆ. ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.

ಪುತ್ರ ಸಂತಾನದ ಬಗ್ಗೆ ಸಂಭ್ರಮದಿಂದ ತಿಳಿಸಲು ಇಚ್ಛಿಸುತ್ತೇನೆ. ಕುಲದೇವತೆ ಚಾಮುಂಡೇಶ್ವರಿ ಕೃಪೆಯಿಂದ ಮಗುವಾಗಿದೆ ಎಂದು ಮೈಸೂರು ಯದುವಂಶದ ರಾಜ ಯದುವೀರ್ ಕೃಷ್ಣದತ್ತ ಒಡೆಯರ್ ಹೇಳಿದ್ದಾರೆ. ರಾಜಲಾಂಛನದೊಂದಿಗೆ ಅಧಿಕೃತ ಪತ್ರವನ್ನು ಬಿಡುಗಡೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...