alex Certify
ಕನ್ನಡ ದುನಿಯಾ       Mobile App
       

Kannada Duniya

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯದುವೀರ ಒಡೆಯರ್

Yaduveer_-_Trishik 27

ಮೈಸೂರು: ವಿಶ್ವ ವಿಖ್ಯಾತ ಮೈಸೂರು ಅರಮನೆಯಲ್ಲಿ ಬಹು ವರ್ಷಗಳ ನಂತರ ಮದುವೆ ಸಂಭ್ರಮ ನಡೆಯುತ್ತಿದ್ದು, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಅವರ ವಿವಾಹ ಮಹೋತ್ಸವ ವೈಭವದಿಂದ ನಡೆಯಿತು.

ಮದುವೆಯ ಸಂಭ್ರಮಕ್ಕೆ ಅರಮನೆಯ ಕಲ್ಯಾಣಮಂಟಪವನ್ನು ವೈಭವದಿಂದ ಅಲಂಕರಿಸಲಾಗಿದ್ದು, ಬೆಳಿಗ್ಗೆ ತ್ರಿಷಿಕಾ ಕುಮಾರಿ ಗೌರಿ ಪೂಜೆ ನೆರವೇರಿಸಿದರು. ಇದರೊಂದಿಗೆ ಯದುವೀರ ಒಡೆಯರ್ ಅವರು, ಗಣಪತಿ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು. ರಾಜ ವಂಶಸ್ಥರಿಗಾಗಿ ಬೆಳ್ಳಿ ತಟ್ಟೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಮದುವೆಗೆ ಬಂದ ಅತಿಥಿಗಳಿಗೆ ಬಾಳೆಎಲೆಯಲ್ಲಿ ಊಟ ಬಡಿಸಲಿದ್ದು, ಪ್ರಸಿದ್ಧ ಬಾಣಸಿಗರಿಂದ ಭಕ್ಷ್ಯ ಭೋಜನಗಳು ಸಿದ್ಧವಾಗಿವೆ.

ಸುಮಾರು 40ಕ್ಕೂ ಅಧಿಕ ಬಗೆಯ ಅಡುಗೆ ಮಾಡಲಾಗಿದ್ದು, ಮೈಸೂರು ಪರಂಪರೆ ಬಿಂಬಿಸುವ ತಿನಿಸುಗಳು ಇವೆ. ಮುಹೂರ್ತ ಮುಗಿದ ನಂತರ ಸಂಜೆ ವಿವಿಧ ಕಾರ್ಯಕ್ರಮಗಳು ಆರಂಭವಾಗಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...