alex Certify
ಕನ್ನಡ ದುನಿಯಾ       Mobile App
       

Kannada Duniya

ಯಡಿಯೂರಪ್ಪಗೆ ಇಬ್ಬರು ಪತ್ನಿಯರೆಂದ ವಿಕಿಪೀಡಿಯಾ !

IMG-20160504-WA0000ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪನವರಿಗೆ ಲೋಕಸಭೆ ಸದಸ್ಯೆ ಹಾಗೂ ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ ಅವರು ಎರಡನೇ ಪತ್ನಿಯಾಗಿದ್ದಾರೆ ಎಂದು ವಿಕಿಪೀಡಿಯಾ ಘೋಷಿಸಿಬಿಟ್ಟಿದೆ.

ಯಡಿಯೂರಪ್ಪನವರ ಪತ್ನಿ ಮೈತ್ರಾದೇವಿಯವರು ನಿಧನರಾಗಿದ್ದಾರೆ. ಶೋಭಾ ಕರಂದ್ಲಾಜೆ ಅವರು ಎರಡನೇ ಪತ್ನಿಯಾಗಿದ್ದಾರೆ ಎಂದು ವಿಕಿಪೀಡಿಯಾದಲ್ಲಿ ಮಾಹಿತಿ ನೀಡಲಾಗಿದೆ. ಯಡಿಯೂರಪ್ಪನವರ ಜೀವನ, ಅವರು ಜನಿಸಿದ್ದು, ರಾಜಕೀಯ ಜೀವನ, ಮುಖ್ಯಮಂತ್ರಿಯಾಗಿದ್ದು, ಅವರ ಆಡಳಿತ ಸೇರಿದಂತೆ ಸಮಗ್ರ ಮಾಹಿತಿಯನ್ನು ನೀಡಲಾಗಿದೆ. ಇದರೊಂದಿಗೆ ಯಡಿಯೂರಪ್ಪನವರ ವೈಯಕ್ತಿಕ ಮಾಹಿತಿ ನೀಡಲಾಗಿದ್ದು, ಅದರಲ್ಲಿ ಶೋಭಾ ಅವರು ಎರಡನೇ ಪತ್ನಿ ಎಂದು ಹೇಳಲಾಗಿದೆ.

ಕೊನೆಗೆ ತನ್ನ ಪ್ರಮಾದವನ್ನು ಸರಿಪಡಿಸಿಕೊಂಡು ಶೋಭಾ ಕರಂದ್ಲಾಜೆ ಅವರ ಹೆಸರನ್ನು ತೆಗೆಯಲಾಗಿದೆ. ಶೋಭಾ ಅವರು, ಪ್ರಸ್ತುತ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಸದಸ್ಯರಾಗಿದ್ದಾರೆ. ಯಡಿಯೂರಪ್ಪನವರು ಶಿವಮೊಗ್ಗ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...