alex Certify
ಕನ್ನಡ ದುನಿಯಾ       Mobile App
       

Kannada Duniya

ಬಿ.ಜೆ.ಪಿ.ಯಲ್ಲಿ ಮತ್ತೆ ಭುಗಿಲೆದ್ದ ಭಿನ್ನಮತ

K-S-Eshwarappa-&-B-S-Y

ಬೆಂಗಳೂರು: ಬಿ.ಜೆ.ಪಿ.ಯಲ್ಲಿ ಮತ್ತೆ ಭಿನ್ನಮತ ಭುಗಿಲೆದ್ದಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನಡುವೆ ಮತ್ತೆ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ.

ಯಡಿಯೂರಪ್ಪ ಅವರು ನಿನ್ನೆ ಪಕ್ಷದ ಕಚೇರಿಯಲ್ಲಿ ಕರೆದಿದ್ದ ಸಭೆಗೆ ಬೆಂಗಳೂರಿನಲ್ಲೇ ಇದ್ದರೂ, ಗೈರು ಹಾಜರಾಗಿದ್ದ ಈಶ್ವರಪ್ಪ, ಇಂದು ಪಕ್ಷದ ಕಚೇರಿಯಿಂದ ಹೊರಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಬಿ.ಜೆ.ಪಿ.ಯ ಅಹಿಂದ ಮುಖಂಡರು ಹಾಗೂ ಪ್ರಮುಖ ಪದಾಧಿಕಾರಿಗಳೊಂದಿಗೆ ಈಶ್ವರಪ್ಪ ಪ್ರತ್ಯೇಕ ಸಭೆ ನಡೆಸಿ, ಬಿ.ಎಸ್.ವೈ. ಅವರ ಏಕಪಕ್ಷೀಯ ನಿರ್ಧಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಪದಾಧಿಕಾರಿಗಳ ನೇಮಕಾತಿ ಸಂದರ್ಭದಲ್ಲಿಯೂ ಈಶ್ವರಪ್ಪ ದೆಹಲಿವರೆಗೂ ಹೋಗಿ ವರಿಷ್ಠರಿಗೆ ದೂರು ನೀಡಿದ್ದರು.

ಕಳೆದ ಸಲ ಪಕ್ಷದ ಕಚೇರಿಯಲ್ಲೇ ಸಭೆ ನಡೆಸಿದ್ದ ಈಶ್ವರಪ್ಪ, ಇಂದು ಪಕ್ಷದ ಕಚೇರಿಯಿಂದ ಹೊರಗೆ ಸಭೆ ನಡೆಸಿ, ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ. ಇದು ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...