alex Certify
ಕನ್ನಡ ದುನಿಯಾ       Mobile App
       

Kannada Duniya

ಯಡಿಯೂರಪ್ಪ ದುಬಾರಿ ಕಾರ್ ಯು ಟರ್ನ್

car bsy a 17

ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಬಿ.ಎಸ್. ಯಡಿಯೂರಪ್ಪ ಅವರಿಗೆ, ಮಾಜಿ ಸಚಿವ ಮುರುಗೇಶ್ ನಿರಾಣಿ, ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಈ ಕಾರಣದಿಂದ ತಮಗೆ ನಿರಾಣಿ ನೀಡಿದ್ದ, 1.12 ಕೋಟಿ ರೂ. ಮೌಲ್ಯದ ಲ್ಯಾಂಡ್ ಕ್ರೂಸರ್ ಪ್ರಾಡೋ ಐಷಾರಾಮಿ ಕಾರನ್ನು ಯಡಿಯೂರಪ್ಪ ವಾಪಸ್ ಕೊಟ್ಟಿದ್ದು, ಇನ್ನುಮುಂದೆ ರೈಲಿನಲ್ಲಿಯೇ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಕಳೆದ 40 ವರ್ಷಗಳಿಂದ ರಾಜಕೀಯ ಜೀವನದಲ್ಲಿರುವ ತಾವು, ಎಂದಿಗೂ ದುಬಾರಿ ಕಾರಿನಲ್ಲಿ ರಾಜ್ಯವನ್ನು ಸುತ್ತಬೇಕೆಂಬ ಬಯಕೆ ಹೊಂದಿಲ್ಲ. ಬಸ್, ರೈಲ್ ಮೊದಲಾದ ವಾಹನಗಳಲ್ಲಿಯೇ ಪ್ರಯಾಣಿಸಿದ್ದೇನೆ ಎಂದಿದ್ದಾರೆ.

ನಿರಾಣಿ ಅವರು ಕೊಟ್ಟಿದ್ದ ಕಾರನ್ನು ವಾಪಸ್ ಕೊಟ್ಟಿರುವುದಾಗಿ ತಿಳಿಸಿದ್ದಾರೆ. ಯಡಿಯೂರಪ್ಪ ಅವರು ಅಧ್ಯಕ್ಷರಾಗುತ್ತಿದ್ದಂತೆ, ನಿರಾಣಿ ದುಬಾರಿ ಬೆಲೆಯ ಐಷಾರಾಮಿ ಕಾರು ಕೊಟ್ಟಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಬಿ.ಎಸ್.ವೈ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದರು. ಈಗ ಅವರೇ ಕಾರನ್ನು ವಾಪಸ್ ಮಾಡಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...