alex Certify
ಕನ್ನಡ ದುನಿಯಾ       Mobile App
       

Kannada Duniya

ಅಪರೂಪದ ದೃಶ್ಯವನ್ನು ಅಚ್ಚರಿಯಿಂದ ನೋಡಿದ ಜನ

ಯಾದಗಿರಿ: ಯಾದಗಿರಿ ಸಮೀಪದ ವರ್ಕನಹಳ್ಳಿ ಯಲ್ಲಿ ದೇವರ ದರ್ಶನಕ್ಕೆ ಬಂದ ಹಾವನ್ನು ನೋಡಲು ಜನಸಾಗರವೇ ನೆರೆದಿದೆ.

ವರ್ಕನಹಳ್ಳಿ ಗ್ರಾಮದ ಹೊರ ವಲಯದಲ್ಲಿ ಆಂಜನೇಯ ಸ್ವಾಮಿ ದೇವಾಲಯವಿದ್ದು, ಮುಖ್ಯ ದ್ವಾರದ ಮೂಲಕ ನಾಗರಹಾವು ಪ್ರವೇಶಿಸಿದೆ. ದೇವರ ಮೂರ್ತಿಯ ಹಿಂಭಾಗದಲ್ಲಿ ಅವಿತುಕೊಂಡಿರುವ ಹಾವು, ಆಗಾಗ ಹೆಡೆ ಎತ್ತಿ ದರ್ಶನ ನೀಡ್ತಿದೆ.

ಈ ಸುದ್ದಿ ತಿಳಿದ ಗ್ರಾಮಸ್ಥರು ತಂಡೋಪತಂಡವಾಗಿ ಬಂದು ವೀಕ್ಷಿಸಿದ್ದಾರೆ. ಅಕ್ಕಪಕ್ಕದ ಊರಿನವರೂ ದೇವಾಲಯದಲ್ಲಿ ಕಾಣಿಸಿಕೊಂಡಿರುವುದನ್ನು ತಿಳಿದು ಬಂದು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ದೇವಾಲಯದೊಳಗೆ ಪ್ರವೇಶಿಸಲು ಜನ ಹಿಂದೇಟು ಹಾಕಿದ್ದಾರೆ. ಹಾವು ಕೂಡ ಹೊರಗೆ ಬರಲು ದಾರಿ ಕಾಣದೇ ಅಲ್ಲೇ ಅಡ್ಡಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...