alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಗದ ವಿಷಯಕ್ಕೆ ಜಗಳ, ಇಬ್ಬರ ಹತ್ಯೆ

ಯಾದಗಿರಿ: ಜಾಗದ ವಿಷಯಕ್ಕೆ ಜಗಳವಾಗಿ ಇಬ್ಬರನ್ನು ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆ ಮಾಡಲಾಗಿದೆ. ಯಾದಗಿರಿ ತಾಲ್ಲೂಕಿನ ಲಿಂಗನಹಳ್ಳಿ ತಾಂಡಾ ನಿವಾಸಿಗಳಾದ ಅಶೋಕ್(30), ಚಂದ್ರು(28) ಕೊಲೆಯಾದವರು.

ಮರೆಪ್ಪ ಅವರ ಪುತ್ರರಾಗಿರುವ ಅಶೋಕ್ ಮತ್ತು ಚಂದ್ರು ಅವರ ಮನೆ ಮುಂದಿನ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ದಾಯಾದಿಗಳೊಂದಿಗೆ ಜಗಳವಾಗಿದೆ.

ನಿನ್ನೆ ಸಂಜೆ ಕಟ್ಟಿಗೆಗಳನ್ನು ತಂದು ಹಾಕಿದ್ದಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದ್ದು, ದಾಯಾದಿಗಳು ಮಾರಕಾಸ್ತ್ರಗಳಿಂದ ಥಳಿಸಿ ಕೊಲೆ ಮಾಡಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಸ್ಥಳಕ್ಕೆ ಯಾದಗಿರಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...