alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ರಾಂಗ್ ಸೈಡ್ ನಲ್ಲಿ ಗಾಡಿ ಓಡಿಸುವ ಮುನ್ನ ಒಮ್ಮೆ ಯೋಚಿಸಿ

ರಾಂಗ್ ಸೈಡ್ ನಲ್ಲಿ ಬೈಕ್, ಕಾರು ಓಡಿಸುವವರು ನೀವಾಗಿದ್ರೆ ಇದು ನಿಮಗೆ ಎಚ್ಚರಿಕೆ ಸುದ್ದಿಯಾಗಲಿದೆ. ಉದ್ದದ ಜಾಮ್ ಇದ್ದಾಗ ಅನೇಕರು ರಾಂಗ್ ಸೈಡಿನಲ್ಲಿ ಗಾಡಿ ಓಡಿಸ್ತಾರೆ. ಇಂಥವರಿಗೆ ಇನ್ಮುಂದೆ ರಾಂಗ್ ಸೈಡ್ ಗಾಡಿ ಚಾಲನೆ ದುಬಾರಿಯಾಗಲಿದೆ. ಹೊಸ ರೀತಿಯ ಸ್ಪೀಡ್ ಬ್ರೇಕರ್ ಅಳವಡಿಸುವ ಸಿದ್ಧತೆ ನಡೆದಿದೆ. ಇದು ರಾಂಗ್ ಸೈಡ್ ಚಾಲನೆ ತಪ್ಪಿಸಲು ಬರ್ತಿದೆ.

ಮಾಧ್ಯಮಗಳ ವರದಿ ಪ್ರಕಾರ, ಬೆಂಗಳೂರು, ಪುಣೆ, ಚೆನ್ನೈ, ಅಹಮದಾಬಾದ್ ಸೇರಿದಂತೆ ಅನೇಕ ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ಹೊಸ ರೀತಿಯ ಸ್ಪೀಡ್ ಬ್ರೇಕರ್ ಕಾಣಸಿಗಲಿದೆ.ಇದಕ್ಕೆ ಟೈರ್ ಕಿಲ್ಲರ್ ಎಂದು ಹೆಸರಿಡಲಾಗಿದೆ. ಸರಿ ದಿಕ್ಕಿನಲ್ಲಿ ವಾಹನ ಚಲಾಯಿಸುವವರಿಗೆ ಇದ್ರಿಂದ ಯಾವುದೇ ತೊಂದರೆಯಿಲ್ಲ. ನಿಯಮ ಮುರಿದು ತಪ್ಪು ದಿಕ್ಕಿನಲ್ಲಿ ವಾಹನ ಚಲಾಯಿಸಿದ್ರೆ ಹೆಸರು ಹೇಳುವಂತೆ ಟೈರ್ ಪಂಚರ್ ಆಗಲಿದೆ.

ಸ್ಪೀಡ್ ಬ್ರೇಕರ್ ವಿರುದ್ಧ ದಿಕ್ಕಿನಲ್ಲಿ ಸ್ಪೈಕರ್ ಗಳನ್ನು ಅಳವಡಿಸಲಾಗುತ್ತದೆ. ಇದು ಟೈರ್ ಪಂಚರ್ ಗೆ ಕಾರಣವಾಗುತ್ತದೆ. ಒಂದು ವೇಳೆ ಇದಕ್ಕೆ ಟೈರ್ ಸಿಕ್ಕಲ್ಲಿ ಹೊಸ ಟೈರ್ ಅಳವಡಿಸದೆ ಬೇರೆ ದಾರಿಯಿರೋದಿಲ್ಲ. ಈ ಕಾರಣಕ್ಕಾದ್ರೂ ಜನ ರಾಂಗ್ ರೂಟ್ ಬಿಟ್ಟು ಸರಿಯಾದ ರಸ್ತೆಯಲ್ಲಿ ಸಂಚರಿಸುತ್ತಾರೆ ಎಂಬ ವಿಶ್ವಾಸವಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...