alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವಶಾಂತಿಗಾಗಿ ಉರುಳು ಸೇವೆ ಮಾಡುತ್ತಿದ್ದಾರೆ ಈ ವ್ಯಕ್ತಿ

ಧಾರವಾಡ: ಮನುಕುಲದ ಒಳಿತಾಗಿ ಸಾಧು-ಸಂತರು, ಋಷಿ ಮುನಿಗಳು ಯಜ್ಞ-ಯಾಗ, ಹೋಮ-ಹವನಗಳನ್ನು ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಮನುಕುಲದ ಏಕತೆ ವಿಶ್ವಶಾಂತಿಗಾಗಿ ಬರೋಬ್ಬರಿ 40 ಕಿ.ಮೀ. ಉರುಳು ಸೇವೆ ಮಾಡುತ್ತಿದ್ದಾರೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಎಮ್ಮೆಟ್ಟಿ ಗ್ರಾಮದ ಈಶ್ವರ ತೋರಣಕಟ್ಟಿ ಎಂಬುವವರು ಈ ಉರುಳುಸೇವೆ ಆರಂಭಿಸಿದ್ದು, ಧಾರವಾಡ ನಗರದ ಗಾಂಧಿ ಚೌಕದಿಂದ ಆರಂಭವಾದ ಅವರ ಉರುಳು ಸೇವೆ ಈಗ ಸ್ವಗ್ರಾಮ ಎಮ್ಮೆಟ್ಟಿ ಗ್ರಾಮಕ್ಕೆ ಬಂದು ತಲುಪಿದ್ದಾರೆ.

ವಿಶ್ವದ ಒಳಿತಿಗಾಗಿ ಕಳೆದ 19ವರ್ಷಗಳಿಂದಲೂ ಈಶ್ವರ ತೋರಣಕಟ್ಟಿ ಹೀಗೆ ಹಲವಾರು ರೀತಿಯ ಸೇವೆಗಳನ್ನು ಮಾಡುತ್ತಲೇ ಬಂದಿದ್ದು, ಈಗ 40 ಕಿ.ಮೀ. ವರೆಗೆ ರಸ್ತೆ ಮೂಲಕವೇ ಉರುಳು ಸೇವೆ ಮಾಡುತ್ತಿರುವುದು ಗಮನಾರ್ಹ. ಅದೇನೇ ಇರಲಿ ನಮ್ಮ ಆರೋಗ್ಯಕ್ಕಾಗಿಯೇ ಒಂದೆರೆಡು ಕಿ.ಮೀ. ವಾಕ್ ಮಾಡಲು ಕಷ್ಟ ಪಡುವ ಈ ಕಾಲದಲ್ಲಿ ವಿಶ್ವಶಾಂತಿಗಾಗಿ 40 ಕಿ.ಮೀ. ರಸ್ತೆಯಲ್ಲಿ ಉರುಳುಸೇವೆ ಮಾಡುತ್ತಿರುವ ಈ ವ್ಯಕ್ತಿಗೆ ನಿಜಕ್ಕೂ ಹ್ಯಾಟ್ಸಾಫ್ ಹೇಳಲೇಬೇಕು.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...