alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಟ ಮಾಡಿಸಿ ವಿಧವೆ ಒಲಿಸಿಕೊಳ್ಳುವೆ ಎಂದ ಕಾಮುಕ

vidave

ಕಾಮುಕರು ಹೇಗೆಲ್ಲಾ ಇರುತ್ತಾರೆ ನೋಡಿ. ಅವಘಡವೊಂದರಲ್ಲಿ ಮೃತಪಟ್ಟ ಕೂಲಿ ಕಾರ್ಮಿಕರೊಬ್ಬರ ಪತ್ನಿಗೆ ಪರಿಹಾರ ಕೊಡಿಸುವ ನೆಪದಲ್ಲಿ ಕಾಮುಕನೊಬ್ಬ ತನ್ನ ಆಸೆ ತೀರಿಸುವಂತೆ ಒತ್ತಡ ಹೇರಿದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

ಯಲಬುರ್ಗ ತಾಲ್ಲೂಕಿನಲ್ಲಿ ಕಳೆದ ವರ್ಷ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯ ಸಂದರ್ಭದಲ್ಲಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದರು. ಮೃತ ಕಾರ್ಮಿಕರ ಕುಟುಂಬದವರಿಗೆ ಪರಿಹಾರ ಕೊಡಿಸುವುದಾಗಿ ವ್ಯಕ್ತಿಯೊಬ್ಬರು ನೆರವಿಗೆ ಬಂದಿದ್ದಾರೆ. ಅವರ ಕುಟುಂಬದವರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸಿದ್ದಾರೆ. ಈ ವ್ಯಕ್ತಿ ಮೃತ ಕಾರ್ಮಿಕರಲ್ಲಿ ಒಬ್ಬನ ಪತ್ನಿಯ ಮೇಲೆ ಕಣ್ಣುಹಾಕಿದ್ದು, ತನಗೆ ಸಹಕರಿಸಬೇಕೆಂದು ಬಲವಂತ ಮಾಡಿದ್ದು, ಆಕೆ ನಿರಾಕರಿಸಿದ್ದಾಳೆ.

ಆದರೂ ಬಿಡದ ಕಾಮುಕ ನಿನಗೆ ಮಾಟ ಮಾಡಿಸುತ್ತೇನೆ. ನೀನೇ ಬರುವಂತೆ ಮಾಡುತ್ತೇನೆ ಎಂದೆಲ್ಲಾ ಬೆದರಿಸಿದ್ದಾನೆ. ಈತನ ಬೆದರಿಕೆಗೆ ಜಗ್ಗದ ವಿಧವೆ ಸುಮ್ಮನಾಗಿದ್ದಾರೆ. ಈತ ಮಾತ್ರ ಪರಿಹಾರ ಕೊಡಿಸುವ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾನೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...