alex Certify
ಕನ್ನಡ ದುನಿಯಾ       Mobile App
       

Kannada Duniya

ಸೀರೆಯಲ್ಲಿ ವಾಕಿಂಗ್: ಗಮನ ಸೆಳೆದ ಮಹಿಳೆಯರು

ಶೂ, ಟ್ರಾಕ್ ಸೂಟ್ ಗಳನ್ನು ಧರಿಸಿ ವಾಕಿಂಗ್ ಮಾಡುವ ಈ ದಿನಗಳಲ್ಲಿ, ಸೀರೆಯುಟ್ಟು ವಾಕಿಂಗ್ ಮಾಡುವ ಮೂಲಕ ಮಂಗಳೂರಿನ ಮಹಿಳೆಯರು ಗಮನ ಸೆಳೆದಿದ್ದಾರೆ.

ಮೆಡಿಮೈಡ್ ಸೊಲ್ಯುಷನ್ ಅಸೋಸಿಯೇಷನ್ ಕ್ಲಬ್ ನ ವತಿಯಿಂದ ‘ಸೀರೆಯಲ್ಲಿ ವಾಕಿಂಗ್’ ಎಂಬ ವಿಶಿಷ್ಠ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಹಿನ್ನಲೆಯಲ್ಲಿ ಬೆಳ್ಳಂಬೆಳಿಗ್ಗೆ ಸೀರೆಯುಟ್ಟು ಗಾಂಧಿ ಪಾರ್ಕ್ ಗೆ ಬಂದ ಮಹಿಳಾಮಣಿಗಳು ಸೀರೆಯಲ್ಲಿ ವಾಕಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಸುಮಾರು 600 ಕ್ಕಿಂತ ಹೆಚ್ಚು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಮಂಗಳಾ ಕ್ರೀಡಾಂಗಣ ಮೂಲಕ ಮಣ್ಣಗುಡ್ಡ ತಲುಪಿ 2 ಕಿಲೋ ಮೀಟರ್ ವರೆಗೂ ಸೀರೆಯಲ್ಲೇ ಆರಾಮವಾಗಿ ವಾಕಿಂಗ್ ಪೂರ್ತಿಗೊಳಿಸಿದ್ದು ವಿಶೇಷವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...