alex Certify
ಕನ್ನಡ ದುನಿಯಾ       Mobile App
       

Kannada Duniya

ಗೃಹಿಣಿಗೆ ಗಂಟು ಬಿದ್ದ ಯುವಕನಿಂದಾಯ್ತು ಅನಾಹುತ

A palm

ಕಾಸರಗೋಡು: ಈಗಾಗಲೇ ಮದುವೆಯಾಗಿ 2 ಮಕ್ಕಳಿರುವ ಮಹಿಳೆಯನ್ನು, ಪ್ರೀತಿಸುವಂತೆ ದುಂಬಾಲು ಬಿದ್ದ ಯುವಕನೊಬ್ಬ ಅನಾಹುತ ಮಾಡಿಕೊಂಡಿದ್ದಾನೆ.

ಕಾಸರಗೋಡಿನ ಮಹಿಳೆಗೆ ಗಂಡನನ್ನು ತೊರೆದು ಮದುವೆಯಾಗುವಂತೆ ಯುವಕ ಗಂಟು ಬಿದ್ದಿದ್ದು, ಆಕೆ ನಿರಾಕರಿಸಿದ್ದಾಳೆ. ಆಕೆಯ ಕಣ್ಣಿಗೆ ಏರ್ ಗನ್ ನಿಂದ ಗುಂಡು ಹಾರಿಸಿ, ಗಂಭೀರವಾಗಿ ಗಾಯಗೊಳಿಸಿದ ಯುವಕ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಹಿಳೆ ಮಡಿಕೇರಿಯಲ್ಲಿ ಗಂಡನೊಂದಿಗೆ ವಾಸವಾಗಿದ್ದು, ಅವರ ಸಂಬಂಧಿಯೇ ಆಗಿದ್ದ ಕೊಡಗು ಜಿಲ್ಲೆ ಹುಣಸೂರಿನ ಯುವಕ, ಪ್ರೀತಿಸುವಂತೆ ಪೀಡಿಸಿದ್ದಾನೆ.

ಪತಿಯನ್ನು ತೊರೆದು ತನ್ನನ್ನು ಮದುವೆಯಾಗುವಂತೆ ಒತ್ತಾಯಪಡಿಸಿದ್ದು, ಆಕೆ ಒಪ್ಪದ ಕಾರಣ ಕಣ್ಣಿಗೆ ಗಾಯಗೊಳಿಸಿದ್ದಾನೆ. ಮಹಿಳೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾಸರಗೋಡು ವಿದ್ಯಾನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...