alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಂಡವಪುರ ರೈಲು ನಿಲ್ದಾಣದಲ್ಲೊಂದು ದುರಂತ ಸಾವು

representational image

ಚಲಿಸುತ್ತಿದ್ದ ರೈಲಿನಿಂದ ಇಳಿಯುವ ವೇಳೆ ಮುಂಬೈನಲ್ಲಿ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಅಂತಹುದೇ ಘಟನೆ ನಡೆದಿದೆ.

ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರಾಜ ರಾಣಿ ಎಕ್ಸ್ ಪ್ರೆಸ್ ರೈಲು ಚಲಿಸುತ್ತಿರುವ ಸಂದರ್ಭದಲ್ಲೇ ಇಳಿಯಲು ಯತ್ನಿಸಿದ 40 ವರ್ಷದ ಮಹಿಳೆಯೊಬ್ಬರು ದುರಂತ ಸಾವನ್ನಪ್ಪಿದ್ದಾರೆ. ಪಾಂಡವಪುರದಲ್ಲಿ ಸ್ಟಾಪ್ ಇರದಿದ್ದರೂ ನಿಧಾನವಾಗಿ ಚಲಿಸುತ್ತಿದ್ದ ಕಾರಣ ಮಹಿಳೆ ಇಳಿಯುವ ಯತ್ನ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಅವರ ಬ್ಯಾಗ್ ರೈಲಿನ ಬಾಗಿಲಿಗೆ ಸಿಕ್ಕಿಹಾಕಿಕೊಂಡಿದ್ದು, ಆಗ ಮಹಿಳೆ ಆಯತಪ್ಪಿ ರೈಲ್ವೇ ಹಳಿ ಮೇಲೆ ಬಿದ್ದಿದ್ದಾರೆ. ರೈಲಿನ ಚಕ್ರ ಅವರ ಮೇಲೆ ಹರಿದ ಪರಿಣಾಮ ದೇಹ ಛಿದ್ರವಾಗಿದೆ. ಪಾಂಡವಪುರ ರೈಲ್ವೇ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...