alex Certify
ಕನ್ನಡ ದುನಿಯಾ       Mobile App
       

Kannada Duniya

ತೆಪ್ಪ ಮುಳುಗಿ ನದಿಯಲ್ಲಿ ಕೊಚ್ಚಿಹೋದ ಮಹಿಳೆ

ಹಾಸನ: ಕೃಷಿ ಕೆಲಸ ಮುಗಿಸಿಕೊಂಡು ತೆಪ್ಪದಲ್ಲಿ ನದಿ ದಾಟುತ್ತಿದ್ದಾಗ ತೆಪ್ಪ ಮುಳುಗಿ ಮಹಿಳೆಯೊಬ್ಬರು ಜಲಸಮಾಧಿಯಾಗಿರುವ ಘಟನೆ ಹಾಸನ ಜಿಲ್ಲೆಯ ಹೇಮಾವತಿ ನದಿಯಲ್ಲಿ ನಡೆದಿದೆ.

ಧಾರಾಕಾರ ಮಳೆಯಿಂದಾಗಿ ಇಲ್ಲಿನ ಸಕಲೇಶಪುರದ ಐಗೂರು ಗ್ರಾಮದಲ್ಲಿನ ಹೇಮಾವತಿ ನದಿಗೆ ಕಟ್ಟಲಾಗಿರುವ ಸೇತುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ನದಿ ದಾಟಬೇಕೆಂದರೆ ಗ್ರಾಮಸ್ಥರು ತೆಪ್ಪವನ್ನು ಬಳಸುವುದು ಅನಿವಾರ್ಯವಾಗಿದೆ.

ಈ ಹಿನ್ನಲೆಯಲ್ಲಿ ಕೃಷಿ ಕೆಲಸಕ್ಕೆ ಬಂದ ನಾಲ್ವರು, ಕೆಲಸ ಮುಗಿಸಿ ವಾಪಸ್ ಮನೆಗೆ ತೆರಳಲು ತೆಪ್ಪದಲ್ಲಿ ನದಿ ದಾಟಲು ಹೋಗಿದ್ದಾರೆ. ಈ ವೇಳೆ ತೆಪ್ಪ ಮುಗುಚಿಬಿದ್ದ ಪರಿಣಾಮ ನಾಲ್ವರು ನದಿಯಲ್ಲಿ ಬಿದ್ದಿದ್ದಾರೆ. ಮೂವರು ಕಷ್ಟಪಟ್ಟು ದಡ ಸೇರಿದ್ದಾರೆ. ಆದರೆ ಸೌಮ್ಯ ಎಂಬ ಮಹಿಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಸೌಮ್ಯಾಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...