alex Certify
ಕನ್ನಡ ದುನಿಯಾ       Mobile App
       

Kannada Duniya

ತಡರಾತ್ರಿ ಮರೆಯಲ್ಲಿ ಖಾಸಗಿ ಕ್ಷಣ ಕಳೆಯುವಾಗ ಆಗಿದ್ದೇನು?

ಬೆಂಗಳೂರು: ತಡರಾತ್ರಿ ಮರದ ಮರೆಯಲ್ಲಿ ಖಾಸಗಿ ಸಮಯ ಕಳೆಯುತ್ತಿದ್ದ ಮಹಿಳೆ ಮತ್ತು ಯುವಕನ ಮೇಲೆ ಯುವಕರ ತಂಡವೊಂದು ದಾಳಿ ಮಾಡಿ ಕಿರುಕುಳ ನೀಡಿದೆ.

ಸುಬ್ಬಣ್ಣಪಾಳ್ಯದ ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿಯಾಗಿರುವ 30 ವರ್ಷದ ಯುವಕ ಹಾಗೂ ಪತಿಯಿಂದ ದೂರವಾಗಿರುವ ಮಹಿಳೆ ಹಲ್ಲೆಗೆ ಒಳಗಾದವರು.

ಮಹಿಳೆಗೆ ಒಬ್ಬಳು ಪುತ್ರಿ ಇದ್ದು, ರಾತ್ರಿ ಮಗಳು ಮಲಗಿದ ಬಳಿಕ ಮನೆಯಿಂದ ಹೊರಗೆ ಬಂದು ಯುವಕನೊಂದಿಗೆ ಜಾಲಿ ರೈಡ್ ಗೆ ಹೋಗುತ್ತಿದ್ದಳು. ಯುವಕ ಮತ್ತು ಮಹಿಳೆ ನಡುವೆ ಅನೈತಿಕ ಸಂಬಂಧವಿದ್ದು, ರಾತ್ರಿ ಜಾಲಿ ರೈಡ್ ಗೆಂದು ಹೋಗಿ ಕತ್ತಲೆಯಲ್ಲಿ ಮರದ ಮರೆಯಲ್ಲಿ ಖಾಸಗಿ ಕ್ಷಣ ಕಳೆಯುತ್ತಿದ್ದರು.

ಏಪ್ರಿಲ್ 29 ರಂದು ರಾತ್ರಿ ಇವರು ಜೊತೆಯಾಗಿದ್ದ ಸಂದರ್ಭದಲ್ಲಿ 2 ಬೈಕ್ ನಲ್ಲಿ ಬಂದಿದ್ದ ನಾಲ್ವರು ಯುವಕರು ಕಿರುಕುಳ ನೀಡಿ ಹಲ್ಲೆ ಮಾಡಿದ್ದಾರೆ. ಯುವಕ ಬಾಣಸವಾಡಿ ಠಾಣೆಗೆ ದೂರು ನೀಡಿದ್ದಾನೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...