alex Certify
ಕನ್ನಡ ದುನಿಯಾ       Mobile App
       

Kannada Duniya

ಮಲಗಿದ್ದವರ ಮೇಲೆ ದಾಳಿ ಮಾಡಿದ ತೋಳಗಳು

tola

ಗದಗ: ಮನೆ ಮುಂದೆ ಮಲಗಿದ್ದವರ ಮೇಲೆ ತೋಳಗಳ ಹಿಂಡು ದಾಳಿ ಮಾಡಿದ ಆತಂಕಕಾರಿ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

ಸೆಖೆಯ ಕಾರಣದಿಂದ ಗುಜಮಾಗಡಿ, ನಾಗರಾಳ, ಯರೇಬೇಗೇರಿ ಗ್ರಾಮದಲ್ಲಿ ಜನ ಹೊರಗೆ ಮಲಗಿದ್ದು, ಈ ಸಂದರ್ಭದಲ್ಲಿ ತೋಳಗಳ ಹಿಂಡು ದಾಳಿ ಮಾಡಿವೆ.

3 ಗ್ರಾಮಗಳಲ್ಲಿ ಸುಮಾರು 20 ಮಂದಿ ತೋಳಗಳ ದಾಳಿಯಿಂದ ಗಾಯಗೊಂಡಿದ್ದು, ಅವರನ್ನು ಗದಗ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

6 ಮಂದಿಗೆ ಗಂಭೀರವಾದ ಗಾಯಗಳಾಗಿವೆ. ರಾತ್ರಿ ಗ್ರಾಮಗಳ ಮೇಲೆ ತೋಳಗಳ ಹಿಂಡು ದಾಳಿ ಮಾಡಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಆಹಾರ, ನೀರು ಇಲ್ಲದ ಕಾರಣ ಪ್ರಾಣಿಗಳು ಗ್ರಾಮಗಳತ್ತ ಮುಖ ಮಾಡತೊಡಗಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...