alex Certify
ಕನ್ನಡ ದುನಿಯಾ       Mobile App
       

Kannada Duniya

ಮೈ ಕೊರೆಯುವ ಮಾಗಿಯ ಚಳಿಗೆ ತತ್ತರಿಸಿದ್ದಾರೆ ಜನ…!

ಕಳೆದ ಒಂದು ವಾರದಿಂದ ವಾತಾವರಣದಲ್ಲಿ ಬದಲಾವಣೆಯಾಗಿದ್ದು, ಚಳಿಗಾಲದ ತೀವ್ರತೆ ಹೆಚ್ಚಾಗಿದೆ. ಮೈ ಕೊರೆಯುವ ಚಳಿಗೆ ಜನ ನಡುಗುವಂತಾಗಿದೆ. ಚಳಿಯ ಹೊಡೆತಕ್ಕೆ ಹೈರಾಣಾಗಿರುವ ಜನ ಬೆಳಗಿನ ಜಾವ ಮನೆಯಿಂದ ಹೊರಗೇ ಬರುತ್ತಿಲ್ಲ. ಮೂಲೆ ಸೇರಿಕೊಂಡಿದ್ದ ಸ್ವೆಟರ್, ಜರ್ಕಿನ್ ಹುಡುಕಿ ಹಾಕಿಕೊಳ್ಳುವಂತಾಗಿದೆ.

ಬೆಳಿಗ್ಗೆ ವಾಕಿಂಗ್ ಹೋಗುವವರ ಸಂಖ್ಯೆಯೂ ಕಡಿಮೆಯಾಗಿದೆ. ದಟ್ಟ ಮಂಜು ಆವರಿಸುತ್ತಿದ್ದು, ಇಬ್ಬನಿಯಿಂದಾಗಿ ಜನ ಟೋಪಿ, ಸ್ವೆಟರ್, ಜರ್ಕಿನ್ ಮೊರೆ ಹೋಗಿದ್ದಾರೆ. ಮೂಲೆ ಸೇರಿದ್ದ ಬೆಚ್ಚನೆಯ ಉಡುಪುಗಳು, ಹೊದಿಕೆಗಳು ಬಳಕೆಯಾಗತೊಡಗಿವೆ.

ಪ್ರತಿ ವರ್ಷದಂತೆಯೇ ಈ ಬಾರಿ ಚಳಿಗಾಲ ಆರಂಭವಾದರೂ ಜನರಿಗೆ ಚಳಿಯ ಅನುಭವ ಆಗಿರಲಿಲ್ಲ. ಹಾಗಾಗಿ ಜನ ಮಳೆಗಾಲದಲ್ಲಿ ಮಳೆ ಬರಲ್ಲ, ಚಳಿಗಾಲದಲ್ಲಿ ಚಳಿಯೂ ಇಲ್ಲ ಎಂದು ಹೇಳುತ್ತಿದ್ದರು. ಆದರೆ, ಕಳೆದ ಒಂದು ವಾರದಿಂದ ಮೈ ಕೊರೆಯುವ ಚಳಿಯ ಹೊಡೆತಕ್ಕೆ ಜನ ತತ್ತರಿಸಿದ್ದಾರೆ. ಸಣ್ಣ ಮಕ್ಕಳಿಗಂತೂ ವಾತಾವರಣದ ಬದಲಾವಣೆಯಿಂದಾಗಿ ಶೀತ, ಜ್ವರ ಬರತೊಡಗಿದೆ. ದೊಡ್ಡವರು ಮೈ ಕೊರೆಯುವ ಚಳಿಗೆ ನಲುಗಿ ಹೋಗಿದ್ದು, ಬೆಚ್ಚನೆಯ ಉಡುಗೆಗಳ ಮೊರೆ ಹೋಗಿದ್ದಾರೆ.

ಬೆಂಕಿ ಹಾಕಿ ಮೈ ಕಾಸಿಕೊಳ್ಳುವ, ಟೀ ಸ್ಟಾಲ್ ಗಳಲ್ಲಿ ಟೀ ಕುಡಿಯುವ ದೃಶ್ಯ ಸಾಮಾನ್ಯವಾಗಿದೆ. ಇದರೊಂದಿಗೆ ಸಂಜೆ ವೇಳೆ ಹಾಟ್ ಡ್ರಿಂಕ್ಸ್ ಸೇವಿಸುವರರ ಸಂಖ್ಯೆಯೂ ಜಾಸ್ತಿಯಾಗಿದೆ. ಬದಲಾದ ವಾತಾವರಣದಿಂದ ಕೆಲವರಿಗೆ ಶೀತ, ಜ್ವರ ಕಾಮನ್ ಆಗಿದ್ದು, ಆಸ್ಪತ್ರೆ, ಮೆಡಿಕಲ್ ಸ್ಟೋರ್ ಗಳಿಗೆ ಎಡತಾಕುತ್ತಿದ್ದಾರೆ. 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...