alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಬಾಗಿಲು ತೆರೆಯಲಿವೆ ಹೆದ್ದಾರಿ ಪಕ್ಕದ ಮದ್ಯದಂಗಡಿಗಳು

ಬೆಂಗಳೂರು: ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಪಕ್ಕದ 500 ಮೀಟರ್‌ ವ್ಯಾಪ್ತಿಯಲ್ಲಿರುವ ಮದ್ಯದ ಅಂಗಡಿಗಳನ್ನು ಬಂದ್‌ ಮಾಡುವಂತೆ ಕಳೆದ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶದ ಹೊರತಾಗಿಯೂ ರಾಜ್ಯ ಸಮ್ಮಿಶ್ರ ಸರ್ಕಾರ ಈಗ ಹೆದ್ದಾರಿ ಪಕ್ಕದ ಎಲ್ಲ ಮದ್ಯದಂಗಡಿಗಳ ಮರು ಆರಂಭಕ್ಕೆ ಪರವಾನಗಿ ನೀಡಲು ನಿರ್ಧರಿಸಿದೆ.

ಈ ಮೂಲಕ ಹೆದ್ದಾರಿ ಪಕ್ಕದ ಬಾರ್‌ಗಳೆಲ್ಲ ಮತ್ತೆ ತೆರೆದುಕೊಳ್ಳಲಿದ್ದು, ಪ್ರತಿ ಜಿಲ್ಲೆಗಳಲ್ಲಿಯೂ ತಲಾ 20ರಿಂದ 25 ಬಾರ್‌ಗಳು ಮರು ಜೀವ ಪಡೆದುಕೊಳ್ಳಲಿವೆ. ಬಂದ್ ಆಗಿರುವ ಬಾರ್ ಹಾಗೂ ಮದ್ಯದಂಗಡಿಗಳ ಪರವಾನಗಿ ನವೀಕರಣಕ್ಕೆ ಯಾವುದೇ ದಂಡ ಅಥವಾ ಹೆಚ್ಚುವರಿ ವಿಶೇಷ ಶುಲ್ಕ ನೀಡುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.

ಆದರೆ ಗ್ರಾಮೀಣ ಭಾಗದಲ್ಲಿ ಬಂದಾಗಿದ್ದ ಎಲ್ಲಾ ಮದ್ಯದಂಗಡಿಗಳನ್ನು ತೆರೆಯಲು ಅವಕಾಶವಿಲ್ಲ. 5000 ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಗ್ರಾಮೀಣ ಪ್ರದೇಶದ ಬಾರ್‌ಗಳಿಗೆ ಮಾತ್ರ ಪರವಾನಗಿ ನವೀಕರಿಸಲಾಗುತ್ತಿದೆ. ಪರವಾನಗಿ ನವೀಕರಣ ಕಾರ್ಯ ಇಂದಿನಿಂದಲೇ ಆರಂಭಗೊಳ್ಳಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...