alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮರಾದಲ್ಲಿ ಸೆರೆಯಾಗಿದೆ ಅಪರೂಪದ ಬಿಳಿ ಹುಲಿ

white-tiger

ಬೆಂಗಳೂರಿನ ವನ್ಯಜೀವಿ ಛಾಯಾಗ್ರಾಹಕರೊಬ್ಬರ ಕ್ಯಾಮರಾದಲ್ಲಿ ಅಪರೂಪದ ಬಿಳಿ ಹುಲಿ ಸೆರೆಯಾಗಿದ್ದು, ಕಳೆದ ವಾರ ನೀಲಗಿರಿ ಅರಣ್ಯ ಪ್ರದೇಶಕ್ಕೆ ತೆರಳಿದ್ದ ವನ್ಯಜೀವಿ ಛಾಯಾಗ್ರಾಹಕ ನಿಲಾಂಜನ್ ರೇ ಅವರ ಕಣ್ಣಿಗೆ ಈ ಹುಲಿ ಬಿದ್ದಿದೆ.

ಕೋಲ್ಕತ್ತಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ಹಳೆ ವಿದ್ಯಾರ್ಥಿಯಾಗಿರುವ ನಿಲಾಂಜನ್ ರೇ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು, ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರೂ ಆಗಿದ್ದಾರೆ.

ನೀಲಗಿರಿ ಅರಣ್ಯ ಪ್ರದೇಶಕ್ಕೆ ಪ್ರವಾಸ ತೆರಳಿದ್ದ ಅವರ ಕಣ್ಣಿಗೆ ಈ ಹುಲಿ ಬಿದ್ದಿದೆ. ಅದರ ಛಾಯಾಚಿತ್ರ ತೆಗೆದ ನಿಲಾಂಜನ್ ರೇ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ ವೇಳೆ ಅದು ನಕಲಿ ಫೋಟೋ ಎಂದು ಕೆಲವರು ಕಮೆಂಟ್ ಮಾಡಿದ್ದರು.

ನಿಲಾಂಜನ್ ರೇ ಬಳಿಕ ಈ ಫೋಟೋವನ್ನು ಖ್ಯಾತ ಪ್ರಾಣಿ ಶಾಸ್ತ್ರಜ್ಞ ಪರ್ವೀಶ್ ಪಾಂಡ್ಯಾ ಅವರಿಗೆ ಕಳುಹಿಸಿಕೊಟ್ಟಿದ್ದು, ಇದು ನೈಜ ಫೋಟೋ ಎಂದು ಅವರು ಖಚಿತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...