alex Certify
ಕನ್ನಡ ದುನಿಯಾ       Mobile App
       

Kannada Duniya

ವರದಿಗಾರನ ಅತ್ಯಾಚಾರ ಪ್ರಕರಣಕ್ಕೆ ಹೊಸ ತಿರುವು

ಮೈಸೂರು: ಮದುವೆಯಾಗುವುದಾಗಿ ನಂಬಿಸಿ ಖಾಸಗಿ ವಾಹಿನಿ ವರದಿಗಾರ ಅತ್ಯಾಚಾರ ಎಸಗಿದ್ದಾಗಿ, ಮಹಿಳಾ ಪಿ.ಎಸ್.ಐ. ಒಬ್ಬರು ದೂರು ನೀಡಿದ್ದ ಪ್ರಕರಣ ಮತ್ತೊಂದು ತಿರುವು ಪಡೆದಿದೆ.

ತನ್ನ ಮದುವೆ ವಿಚಾರವನ್ನು ಮುಚ್ಚಿಟ್ಟಿದ್ದ ವರದಿಗಾರ ವಿಚ್ಛೇದಿತೆಯಾಗಿರುವ ಪಿ.ಎಸ್.ಐ. ಅವರನ್ನು ಮದುವೆಯಾಗುವುದಾಗಿ ನಂಬಿಸಿ, ಹಲವು ಸಲ ಅತ್ಯಾಚಾರ ಎಸಗಿದ್ದಾಗಿ ದೂರು ನೀಡಲಾಗಿದೆ. ಇದಾದ ಬಳಿಕ ವರದಿಗಾರ ನಾಪತ್ತೆಯಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಈ ನಡುವೆ ಪ್ರಕರಣ ಮತ್ತೊಂದು ತಿರುವು ಪಡೆದಿದೆ. ತಮ್ಮ ಪತಿಯನ್ನು ಬಲವಂತವಾಗಿ ಮತಾಂತರ ಮಾಡಿ ಮದುವೆಯಾಗಲು ಮಹಿಳಾ ಪಿ.ಎಸ್.ಐ. ಯತ್ನಿಸಿದ್ದಾರೆ ಎಂದು ವರದಿಗಾರನ ಪತ್ನಿ ಕುವೆಂಪು ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ತಮ್ಮ ಪತಿಯನ್ನು ಮದುವೆಯಾಗಲು ಮುಂದಾಗಿರುವ ಪಿ.ಎಸ್.ಐ. ತಮಗೆ ಬೆದರಿಕೆ ಹಾಕಿದ್ದಾರೆ. ಮತಾಂತರಗೊಂಡು ಮದುವೆಯಾಗಲು ಬಲವಂತ ಮಾಡಿದ್ದು, ಇಲ್ಲವಾದರೆ ಅತ್ಯಾಚಾರದ ಕೇಸ್ ದಾಖಲಿಸುವುದಾಗಿ ಬೆದರಿಸಿದ್ದಾರೆ. ಇದರಿಂದಾಗಿ ಪತಿ ನಾಪತ್ತೆಯಾಗಿದ್ದಾರೆ ಎಂದು ವರದಿಗಾರನ ಪತ್ನಿ ದೂರು ನೀಡಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...