alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯತಮನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ

ಬೆಂಗಳೂರು: ಪತ್ನಿಯೇ ಪತಿಯನ್ನು ಕತ್ತು ಬಿಗಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವೀರಸಾಗರ ಗ್ರಾಮದ ನಿವಾಸಿ ಸಗಾಯ್ ರಾಜ್ (30) ಕೊಲೆಯಾದ ವ್ಯಕ್ತಿ. 5 ವರ್ಷಗಳ ಹಿಂದೆ ಸಗಾಯ್ ರಾಜ್ ಎಂಬಾತನನ್ನು ಮಮತಾ ವಿವಾಹವಾಗಿದ್ದಳು. ಸಗಾಯ್ ರಾಜ್ ನನ್ನು ವಿವಾಹವಾಗುವ ಮೊದಲೇ ಮಮತಾ, ಅಪ್ಪು ಎಂಬಾತನನ್ನು ಪ್ರೀತಿಸುತ್ತಿದ್ದಳು. ಪ್ರೇಮ ವಿವಾಹಕ್ಕೆ ವಿರೋಧಿಸಿದ್ದ ಮಮತಾ ಮನೆಯವರು ಸಗಾಯ್ ರಾಜ್ ಜೊತೆ ಮದುವೆ ಮಾಡಿಕೊಟ್ಟಿದ್ದರು.

ಮದುವೆ ನಂತರವೂ ಮಮತಾ ಹಾಗೂ ಅಪ್ಪು ನಡುವಿನ ಪ್ರೇಮ ಮುಂದುವರೆದಿತ್ತು. ಇವರಿಬ್ಬರ ಪ್ರೇಮಕ್ಕೆ ಪತಿ ಸಗಾಯ್ ಅಡ್ಡಿಯಾಗುತ್ತಾನೆಂಬ ಕಾರಣಕ್ಕೆ ಮಮತಾ ಹಾಗೂ ಆಕೆಯ ಪ್ರಿಯಕರ ಅಪ್ಪು ಸೇರಿ ಸಗಾಯ್ ನನ್ನು ಕತ್ತು ಹಿಸುಕಿ ಸಾಯಿಸಿದ್ದಾರೆ. ಆರೋಪಿಗಳಾದ ಮಮತಾ ಹಾಗೂ ಅಪ್ಪು ಈಗ ಪೊಲೀಸರ ಅತಿಥಿಗಳಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...