alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ನಲ್ಲಿ ಮಿಸ್ ಆಗಿ ಸೆಂಡ್ ಆಯ್ತು ಬೆತ್ತಲೆ ಫೋಟೋ

ಕಾರವಾರ: ಮೊಬೈಲ್, ಸಾಮಾಜಿಕ ಜಾಲತಾಣ ಬಳಸುವಾಗ ಎಚ್ಚರಿಕೆ ವಹಿಸದಿದ್ದರೆ ಹೇಗೆಲ್ಲಾ ಯಡವಟ್ಟುಗಳಾಗುತ್ತವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಅಂತಹುದೇ ಪ್ರಕರಣವೊಂದರ ಮಾಹಿತಿ ಇಲ್ಲಿದೆ ನೋಡಿ.

ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರನ್ನೊಳಗೊಂಡ ವಾಟ್ಸಾಪ್ ಗ್ರೂಪ್ ನಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬೆತ್ತಲೆ ಫೋಟೋ ಅಪ್ ಲೋಡ್ ಮಾಡಿಬಿಟ್ಟಿದ್ದಾರೆ.

ಸದಸ್ಯನ ಪುತ್ರನೇ ಗ್ರೂಪ್ ಗೆ ಅಡ್ಮಿನ್ ಆಗಿದ್ದು, ರಾಜ್ಯದ ಹಾಗೂ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕರು, ಮುಖಂಡರು ಈ ಗ್ರೂಪ್ ನಲ್ಲಿದ್ದಾರೆ. ಪುರಸಭೆ ಸದಸ್ಯ ಮಿಸ್ ಆಗಿ ತನ್ನದೇ ಬೆತ್ತಲೆ ಫೋಟೋಗಳನ್ನು ಈ ಗ್ರೂಪ್ ಗೆ ಅಪ್ ಲೋಡ್ ಮಾಡಿದ್ದು, ಅಡ್ಮಿನ್ ಆಗಿದ್ದ ಆತನ ಪುತ್ರ ಸದಸ್ಯರನ್ನು ರಿಮೂವ್ ಮಾಡಿ ಗ್ರೂಪ್ ಡಿಲಿಟ್ ಮಾಡಿದ್ದಾನೆ. ಯಾರಿಗೂ ವಿಷಯ ತಿಳಿಸದಂತೆ ಆತ ಮನವಿ ಮಾಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತನ್ನದೇ ಫೋಟೋ ಅಪ್ ಲೋಡ್ ಮಾಡಿದ್ದ ಪುರಸಭೆ ಸದಸ್ಯ ಮುಜುಗರಕ್ಕೀಡಾಗಿದ್ದಲ್ಲದೇ ಗ್ರೂಪ್ ಸದಸ್ಯರಿಗೂ ಮುಜುಗರ ಉಂಟು ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...