alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಗ್ರೂಪ್ ಅಡ್ಮಿನ್ ಆಗಿದ್ದರೆ ತಪ್ಪದೇ ಓದಿ ಈ ಸುದ್ದಿ

ಬೆಳಗಾವಿ: ‘ಟಾಪ್‌ ಮ್ಯೂಸಿಕ್‌ ಓನ್ಲಿ’ ಎಂಬ ಹೆಸರಿನಲ್ಲಿ ವಾಟ್ಸಾಪ್ ಗ್ರೂಪ್‌ ರಚಿಸಿ ಮತೀಯ ಮತ್ತು ಕೋಮು ಭಾವನೆ ಕೆರಳಿಸುವ ರೀತಿಯಲ್ಲಿ ಸಂದೇಶ ಕಳುಹಿಸಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತಿದ್ದ ಆರೋಪದ ಮೇಲೆ ವಾಟ್ಸಾಪ್ ಗ್ರೂಪ್‌ ಅಡ್ಮಿನ್‌ ಒಬ್ಬನನ್ನು ಬೆಳಗಾವಿಯ ಸೈಬರ್‌ ಎಕನಾಮಿಕ್‌ ಆ್ಯಂಡ್‌ ನಾಕೋಟಿಕ್‌ (ಸಿಇಎನ್‌) ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉದ್ಯಮಬಾಗದ ಕೈಗಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿರುವ ಅಕ್ಷಯ ರಾಜೇಂದ್ರ ಅಲಗೋಡಿಕರ (20) ಬಂಧಿತ ಆರೋಪಿ. ಈತ ಟಾಪ್‌ ಮ್ಯೂಸಿಕ್‌ ಓನ್ಲಿ’ ಹೆಸರಿನಲ್ಲಿ ವಾಟ್ಸಾಪ್ ಗ್ರೂಪ್‌ ರಚಿಸಿ ದೇಶ-ವಿದೇಶಿ ಕೆಲ ಸದಸ್ಯರನ್ನು ಸೇರಿಸಿಕೊಂಡಿದ್ದ.

ಈ ಗುಂಪಿನಿಂದ ಕೋಮು ಭಾವನೆ ಕೆರಳಿಸುವ ರೀತಿಯಲ್ಲಿ ಸಂದೇಶಗಳು ರವಾನೆಯಾಗುತ್ತಿದ್ದವು. ದೇವರ ಚಿತ್ರಗಳಿಗೆ ಅಶ್ಲೀಲ ಚಿತ್ರಗಳನ್ನು ಕ್ಲೋನ್‌ ಮಾಡಿ ಹರಿಬಿಡುವುದು ಕಂಡು ಬಂದಿತ್ತು. ಈ ಕುರಿತು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಸಿಇಎನ್‌ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನೂ ಗ್ರೂಪಿಗೆ ಸೇರಿಸಿದ್ದ ಅಕ್ಷಯ್, ಆ.5ರಂದು ಪಾಕಿಸ್ತಾನಿ ಪ್ರಜೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಗ್ರೂಪಿಗೆ ಸಂದೇಶ ಹಾಕಿದ್ದರು. ಈ ಸಂದೇಶ ಭಾರೀ ವೈರಲ್‌ ಆಗುತ್ತಿರುವುದನ್ನು ಗಮನಿಸಿದ ಸಿಇಎನ್‌ ಪೊಲೀಸರು, ಕೋಮು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವ ಹಿನ್ನಲೆಯಲ್ಲಿ ಗ್ರೂಪ್‌ ಅಡ್ಮಿನ್‌ ಅಕ್ಷಯ್‌ನನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...