alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಲ್ಲಿ ಟೇಬಲ್ ಫ್ಯಾನ್, ಮ್ಯಾಟ್ರೆಸ್ ಕೊಡಿ ಎನ್ನುತ್ತಿದ್ದಾರೆ ಶಶಿಕಲಾ

sasikala2-knqd-621x414livemint

ಭ್ರಷ್ಟಾಚಾರ ಪ್ರಕರಣದಲ್ಲಿ ವಿಕೆ ಶಶಿಕಲಾ ಜೈಲು ಸೇರಿ ವಾರ ಕಳೆದಿದೆ. ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಸಿಎಂ ಆಗುವ ಶಶಿಕಲಾ ಕನಸು ಕಮರಿ ಹೋಗಿದ್ದು, ಜೈಲಿನ ನಾಲ್ಕು ಗೋಡೆಗಳ ಮಧ್ಯೆ 4 ವರ್ಷ ಕಾಲ ಕಳೆಯಬೇಕಿದೆ. ತಮ್ಮ ವಯಸ್ಸು ಮತ್ತು ಅನಾರೋಗ್ಯದ ಹಿನ್ನೆಲೆಯಲ್ಲಿ ಜೈಲಿನಲ್ಲೂ ಒಳ್ಳೆಯ ಸೌಲಭ್ಯ ಸಿಗಬಹುದು ಅನ್ನೋದು ಶಶಿಕಲಾ ನಿರೀಕ್ಷೆ.

ಜೈಲಿನ ಬದುಕಿಗೆ ಶಶಿಕಲಾ ಈಗಾಗ್ಲೇ ಹೊಂದಿಕೊಂಡಿದ್ದಾರೆ. ಅವರ ಶುಗರ್ ಲೆವಲ್ ಹಾಗೂ ರಕ್ತದೊತ್ತಡ ಕೂಡ ನಿಯಂತ್ರಣದಲ್ಲಿದೆ. ಆದ್ರೂ ‘ಚಿನ್ನಮ್ಮ’ನಿಗೆ ಒಂದು ಮಂಚ, ಮ್ಯಾಟ್ರೆಸ್, ಟೇಬಲ್ ಫ್ಯಾನ್, ಅಟ್ಯಾಚ್ಡ್ ಬಾತ್ ರೂಮ್ ಬೇಕಂತೆ.

ಚೆನ್ನೈನ ಸೆಂಟ್ರಲ್ ಜೈಲಿಗೆ ಸ್ಥಳಾಂತರ ಆಗುವವರೆಗೆ ಇದನ್ನೆಲ್ಲ ಕೊಟ್ರೆ ಶಶಿಕಲಾ ಆರಾಮಾಗಿರಬಹುದು ಎನ್ನುತ್ತಾರೆ ಎಐಎಡಿಎಂಕೆ ಮುಖಂಡರು. ಕೋರ್ಟ್ ಒಪ್ಪಿದಲ್ಲಿ ಮಾತ್ರ ಶಶಿಕಲಾರನ್ನು ಪರಪ್ಪನ ಅಗ್ರಹಾರದಿಂದ ಚೆನ್ನೈ ಜೈಲಿಗೆ ಸ್ಥಳಾಂತರ ಮಾಡಲಾಗುತ್ತದೆ.  ಈ ಹಿಂದೆ ಮನೆಯಲ್ಲಿ ತಯಾರಿಸಿದ ಆಹಾರ ಮತ್ತು ಮಿನರಲ್ ವಾಟರ್ ಗಾಗಿ ಶಶಿಕಲಾ ಮನವಿ ಸಲ್ಲಿಸಿದ್ದರು. ಆದ್ರೆ ಜೈಲು ಅಧಿಕಾರಿಗಳು ಅದನ್ನು ತಿರಸ್ಕರಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...