alex Certify
ಕನ್ನಡ ದುನಿಯಾ       Mobile App
       

Kannada Duniya

ಡೇಟಾ ಸೋರಿಕೆ ವಿವಾದ, ನಟಿ ರಮ್ಯಾ ಹೇಳಿದ್ದೇನು…?

ಮೊಬೈಲ್ ಅಪ್ಲಿಕೇಶನ್ ಗಳಲ್ಲಿ ಡೇಟಾ ಸೋರಿಕೆ ವಿಚಾರ ಕಾಂಗ್ರೆಸ್-ಬಿಜೆಪಿ ಮಧ್ಯೆ ಕೆಸರೆರಚಾಟಕ್ಕೆ ಕಾರಣವಾಗಿದೆ. ಎರಡೂ ಪಕ್ಷಗಳು ವಿದೇಶದಲ್ಲಿರುವ ಕಂಪನಿಗಳೊಂದಿಗೆ ಆ್ಯಪ್ ಬಳಕೆದಾರರ ವೈಯಕ್ತಿಕ ವಿವರ ಹಂಚಿಕೊಂಡ ಆರೋಪ ಎದುರಿಸುತ್ತಿವೆ.

ನಮೋ ಆ್ಯಪ್ ನಲ್ಲಿ ಡೇಟಾ ಸೋರಿಕೆಯಾಗ್ತಿದೆ ಅನ್ನೋ ಮಾಹಿತಿ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಅಧಿಕೃತ ಆ್ಯಪ್ ಮೂಲಕ ಸದಸ್ಯರ ವಿವರವನ್ನೆಲ್ಲ ಮೂರನೇ ವ್ಯಕ್ತಿಗೆ ವರ್ಗಾಯಿಸುತ್ತಿರುವುದು ಬೆಳಕಿಗೆ ಬಂದಿತ್ತು. ಆದ್ರೆ ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ಇಲಾಖೆ ಮುಖ್ಯಸ್ಥೆ, ನಟಿ ರಮ್ಯಾ ಇದನ್ನೆಲ್ಲ ಅಲ್ಲಗಳೆದಿದ್ದಾರೆ.

ನವೆಂಬರ್ ನಲ್ಲಿ ನಾವು ಹೊಸ ವೆಬ್ ಸೈಟ್ ಮಾಡಿದ್ದೇವೆ. ಆ್ಯಪ್ ನಲ್ಲಿ ಸದಸ್ಯತ್ವ ಆಪ್ಷನ್ ತೆಗೆದುಹಾಕಿ ಅದನ್ನು ವೆಬ್ ಸೈಟ್ ನಲ್ಲಿ ಅಳವಡಿಸಿದ್ದೇವೆ. ಹಾಗಾಗಿ ಆ್ಯಪ್ ನಲ್ಲಿ ಸದಸ್ಯತ್ವಕ್ಕೆ ಬೇಕಾದ ಯಾವ ಮಾಹಿತಿಯನ್ನೂ ಸಂಗ್ರಹಿಸುತ್ತಿಲ್ಲ. ಡೇಟಾ ಸೋರಿಕೆಯಾಗಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ ರಮ್ಯಾ.

ಬಿಜೆಪಿ ಹಾಗೂ ಕೆಲ ಪತ್ರಕರ್ತರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಜನರ ಮನಸ್ಸಿನಲ್ಲಿ ಅನುಮಾನ ಹುಟ್ಟುಹಾಕುತ್ತಿದ್ದಾರೆ ಅಂತಾ ದೂರಿದ್ದಾರೆ. ನಮೋ ಆ್ಯಪ್ ನಲ್ಲಿ ಡೇಟಾ ಸೋರಿಕೆಯಾಗ್ತಿದೆ ಅನ್ನೋ ಸುದ್ದಿ ಹರಡುತ್ತಿದ್ದಂತೆ, ರಾಹುಲ್ ಗಾಂಧಿ ಸಹ ಮೋದಿ ವಿರುದ್ಧ ಹರಿಹಾಯ್ದಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...