alex Certify
ಕನ್ನಡ ದುನಿಯಾ       Mobile App
       

Kannada Duniya

ಸೋರುತಿದೆ ವಿಧಾನಸೌಧದ ಮಾಳಿಗೆ….

ಬೆಂಗಳೂರು: ಒಂದು ಕಡೆ ಲಕ್ಷಾಂತರ ರೂ. ವೆಚ್ಚದಲ್ಲಿ ವಿಧಾನಸೌಧದ ಸಚಿವರ ಕೊಠಡಿಗಳು ನವೀಕರಣಗೊಳ್ಳುತ್ತಿದ್ದರೆ ಮತ್ತೊಂದೆಡೆ ಕಟ್ಟಡದ ಛಾವಣಿ ದುರ್ಬಲಗೊಳ್ಳುತ್ತಿದೆ.

ಶುಕ್ರವಾರ ಸಂಜೆ ಸುರಿದ ಮಳೆಗೆ ವಿಧಾನಸೌಧದ ಮೂರನೇ ಮಹಡಿಯ ಸಮ್ಮೇಳನ ಸಭಾಂಗಣ ಸೋರಿಕೆಯಾಗಿದೆ.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಈ ಸಭಾಂಗಣಕ್ಕೆ ಆಗಮಿಸುವ ಕೆಲವೇ ಹೊತ್ತಿನ‌ ಮುನ್ನ ನೀರು ಧಾರಾಕಾರವಾಗಿ ಸಭಾಂಗಣದೊಳಕ್ಕೆ ಇಳಿಯುತ್ತಿತ್ತು.

ಕಟ್ಟಡದ ಒಳಗೆ ನವೀಕರಣದ ನೆಪದಲ್ಲಿ ಪದೇ ಪದೆ ಒಡೆದು ಕಟ್ಟುತ್ತಿರುವ ಕಾರಣ ದುರ್ಬಲಗೊಳ್ಳುತ್ತಿದೆ ಎಂಬ ಆರೋಪ ಸಹ ಕೇಳಿ ಬಂದಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಧಿಕಾರಿಗಳು, ರಿಪೇರಿಗಾಗಿ ಸಾಮಗ್ರಿ ಬಂದಿದ್ದು, ಮಳೆ ಕಡಿಮೆಯಾದ ಕೂಡಲೇ ಕೆಲಸ ಆರಂಭಿಸುವುದಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...