alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ! ಉಷ್ಣಾಂಶ ಏರಿಕೆಯಿಂದ ಹೆಚ್ಚುತ್ತಿದೆ ಗರ್ಭಪಾತ

cow

ಬೆಳಗಾವಿ: ರಾಜ್ಯದ ಹಲವು ಕಡೆಗಳಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದ್ದು, ಬಿಸಿಲಿನ ತಾಪವೂ ಏರಿಕೆಯಾಗಿದೆ. ಪಕ್ಕದ ರಾಜ್ಯದಲ್ಲಿ ಬಿಸಿಲ ಹೊಡೆತಕ್ಕೆ 100ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿಯೂ ಜನ, ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ಪರಿತಪಿಸುವಂತಾಗಿದೆ.

ಬೆಳಗಾವಿ, ಕೊಪ್ಪಳ ಜಿಲ್ಲೆಯ ವಿವಿಧ ಕಡೆಗಳಲ್ಲಿ ಜಾನುವಾರುಗಳಿಗೆ ಮೇವು, ನೀರಿಲ್ಲದೇ, ತೊಂದರೆಯಾಗಿದೆ. ಜಾನುವಾರುಗಳನ್ನು ಸಾಕಲಾಗದೇ, ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಜಿಲ್ಲಾಡಳಿತದಿಂದ ಅಥಣಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಗೋಶಾಲೆ ತೆರೆದಿದ್ದು, ಇಲ್ಲಿರುವ ಜಾನುವಾರುಗಳಿಗೆ ಸಾಕಾಗುವಷ್ಟು ಮೇವು, ನೀರು ಸಿಗುತ್ತಿಲ್ಲ. ಬಿಸಿಲಿನಲ್ಲಿಯೇ ಜಾನುವಾರುಗಳು ಇರುವಂತಾಗಿದ್ದು, ಗೋ ಶಾಲೆಯಲ್ಲಿ ನೆರಳಿನ ವ್ಯವಸ್ಥೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಗೋಶಾಲೆಯಲ್ಲಿ ರೈತರೇ ಕೆಲವು ಜಾನುವಾರುಗಳಿಗೆ ನೆರಳಿನ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿನ ಗೋಶಾಲೆಯನ್ನು ಮರಗಿಡಗಳಿರುವ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು ರೈತರು ಮನವಿ ಮಾಡಿದ್ದಾರೆ. ಮತ್ತೊಂದು ಸಂಗತಿ ಎಂದರೆ, ಗೋಶಾಲೆಯಲ್ಲಿನ ಗರ್ಭ ಧರಿಸಿದ ಹಸುಗಳಿಗೆ ಬಿಸಿಲಿನ ತಾಪಕ್ಕೆ ಗರ್ಭಪಾತವಾಗುತ್ತಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...